ಮಿತ್ರಂಪಾಡಿ ಜಯರಾಮ ರೈ ಅಬುಧಾಬಿರವರಿಗೆ ಟೋಸ್ಟ್ ಮಾಸ್ಟರ್ ಇಂಟರ್‌ನ್ಯಾಷನಲ್‌ನ ಅತ್ಯುನ್ನತ ಪದವಿ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯಮಿಯಾಗಿರುವ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರು ಪ್ರತಿಷ್ಠಿತ ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ಸಂಸ್ಥೆಯ ಅತ್ಯುನ್ನತ ಪದವಿ ಡಿ.ಟಿ.ಎಂ.,ಇತರ ಶ್ರೇಷ್ಟ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

1924ರಲ್ಲಿ ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ನಾನ್ ಪ್ರಾಫಿಟ್ ಎಜುಕೇಶನಲ್ ಆರ್ಗನೈಸೇಶನ್ ಯು.ಎಸ್.ಎ.ಯಲ್ಲಿ ಪ್ರಾರಂಭವಾಗಿ ಪ್ರಸ್ತುತ 144ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಬಹಳಷ್ಟು ಅತ್ಯುನ್ನತ ಕಾರ್ಯ ನಿರ್ವಹಿಸುತ್ತಿದೆ.ಕಮ್ಯುನಿಕೇಷನ್ ಮತ್ತು ಲೀಡರ್‌ಶಿಪ್ ಎಂಬ ಧ್ಯೇಯವಾಕ್ಯದೊಂದಿಗೆ ಜಗತ್ತಿನಾದ್ಯಂತ ಲಕ್ಷಾಂತರ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರು ಐ.ಎಸ್.ಸಿ.ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ಇದರ ಸ್ಥಾಪಕ ಅಧ್ಯಕ್ಷರಾಗಿ, ಏರಿಯಾ ಡೈರೆಕ್ಟರ್ ಆಗಿ,ಇನ್ನಿತರ ಸೇವೆಗಳಲ್ಲಿ ಮುಂದುವರೆಯುತ್ತಿದ್ದಾರೆ.ಶ್ರೇಷ್ಠ ಭಾಷಣಕಾರರಾಗಿ, ನಾಯಕತ್ವ ಬೋಧಕರಾಗಿ,ಸಲಹೆಗಾರರಾಗಿ ಬಹಳಷ್ಟು ಜನರ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಇವರ ಕೊಡುಗೆಯಿದೆ.ಪ್ರಸ್ತುತ ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ಸಂಸ್ಥೆ ಅಂತರ‍್ರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಹೆಸರನ್ನು ಗಳಿಸುತ್ತಾ, ಜೀವನದಲ್ಲಿ ಹೊಸತನವನ್ನು ಮೂಡಿಸುತ್ತಿರುವ ಶ್ರೇಷ್ಠ ಸಂಸ್ಥೆಯಾಗಿದೆ.ಇದರ ಅಡಿಯಲ್ಲಿ `ಗ್ಯವೆಲ್ ಕ್ಲಬ್’ ಎಂಬ ಸಂಸ್ಥೆ ಮಕ್ಕಳ ಆದರ್ಶ ಜೀವನವನ್ನು ರೂಪಿಸುವುದರೊಂದಿಗೆ ಉದ್ಯೋಗ ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಯಲು ಬಹಳಷ್ಟು ಸಹಕಾರಿಯಾಗುತ್ತದೆ.

ಸಮಾಜ ಸೇವೆಯೊಂದಿಗೆ ದೇಶ ಸೇವೆಯನ್ನೂ ಮೈಗೂಡಿಸಿಕೊಂಡಿರುವ ಜಯರಾಮ ರೈಯವರು ಉತ್ತಮ ಕಾರ್ಯನಿರ್ವಾಹಕರಾಗಿದ್ದು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ.ಜಿಲ್ಲಾ ರಾಜ್ಯೋತ್ಸವ, ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡ್, ಗಡಿನಾಡ ಸದ್ಭಾವನಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದುಕೊಂಡಿರುವ ಜಯರಾಮ್ ರೈಯವರು ವಿಶ್ವದಲ್ಲೇ ಅತಿ ದೊಡ್ಡ ಅನಿವಾಸಿ ಭಾರತೀಯ ಸಂಸ್ಥೆ (ಐ.ಎಸ್.ಸಿ.ಅಬುಧಾಬಿ)ಯ ಉಪಾಧ್ಯಕ್ಷರಾಗಿ, ಲೆಕ್ಕ ಪರಿಶೋಧಕರಾಗಿ, ಚೀಫ್ ಪೋಲಿಂಗ್ ಆಫೀಸರ್ ಆಗಿ ಅಲ್ಲದೆ ಪ್ರಾಯೋಜಕರಾಗಿಯೂ ಹಲವು ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಕಲೆ,ಸಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಹಲವು ಸಂಘ ಸಂಸ್ಥೆಗಳಿಗೆ ಸಹಾಯ, ಸೇವೆ ಮಾಡುತ್ತಿರುವ ಜಯರಾಮ ರೈಯವರು ಪ್ರಗತಿಪರ ಕೃಷಿಕ ಮಿತ್ರಂಪಾಡಿ ದಿ|ಚೆನ್ನಪ್ಪ ರೈ ಮತ್ತು ಡಿಂಬ್ರಿಗುತ್ತು ದಿ|ಸರಸ್ವತಿ ರೈಯವರ ಮಗ.ಕಳೆದ 24 ವರ್ಷಗಳಿಂದ ತನ್ನ ವಾರ್ಷಿಕ ಸಂಪಾದನೆಯ ಒಂದಂಶವನ್ನು ಸಮಾಜ ಸೇವೆ ಮತ್ತು ದೇಶ ಸೇವೆಗಳಿಗೆ ಸದಾ ವಿನಿಯೋಗಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here