







ಉಪ್ಪಿನಂಗಡಿ: ಇಲ್ಲಿನ ಮಹಾಕಾಳಿ ಅಮ್ಮನವರ ಮೆಚ್ಚಿ ಜಾತ್ರೆಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವಿಗೆ ಮಲ್ಲಿಗೆಯನ್ನು ಸಮರ್ಪಣೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಸೇವೆಗಳನ್ನು ಕೈಗೊಂಡರು.





ಪುತ್ತೂರು ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಉಮೇಶ್ ಶೆಣೈ ಎನ್., ಸುರೇಶ್ ಅತ್ರೆಮಜಲು, ರಾಮಚಂದ್ರ ಮಣಿಯಾಣಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರೀಶ ಉಪಾಧ್ಯಾಯ, ಹರಿರಾಮಚಂದ್ರ, ಹರಿಣಿ ಕೆ., ಸುನೀಲ್ ಎ., ಪ್ರೇಮಲತಾ, ರಾಮ ನಾಯ್ಕ, ಜಯಂತ ಪೊರೋಳಿ, ಮಹೇಶ್ ಜಿ., ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಪದ್ಮನಾಭ, ದಿವಾಕರ, ಕೃಷ್ಣಪ್ರಸಾದ್, ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.








