ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಆಡಳಿತ ಮಂಡಳಿ:ಅಧ್ಯಕ್ಷ ವೆಂಕಟ್ರಮಣ ಕಳುವಾಜೆ, ಸಂಚಾಲಕ ಎ.ವಿ.ನಾರಾಯಣ್

0

ಪುತ್ತೂರು: ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಅಡಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬನ್ನೂರು ಗ್ರಾಮದ ಅಲುಂಬುಡ ಕೃಷ್ಣನಗರ ಸಮೀಪದ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವೆಂಕಟ್ರಮಣ ಕಳುವಾಜೆ, ಸಂಚಾಲಕರಾಗಿ ಎ.ವಿ.ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ.


ಇತ್ತೀಚೆಗಷ್ಟೆ ಅಲುಂಬುಡದಲ್ಲಿ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಆಡಳಿತ ಕಚೇರಿ ಉದ್ಘಾಟನೆಗೊಂಡಿತ್ತು.ಈ ಸಂದರ್ಭ ಆಡಳಿತ ಮಂಡಳಿಯ ರಚನೆಯಾಗಿತ್ತು.ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷರಾಗಿ ಉಮೇಶ್ ಗೌಡ ಮಳವೇಲು, ಕೋಶಾಧಿಕಾರಿಯಾಗಿ ವನಿತಾ ಎ.ವಿ, ಜೊತೆ ಕಾರ್ಯದರ್ಶಿಯಾಗಿ ಮನೋಹರ್ ರೈ ಮೇಲ್ಮಜಲು, ಕಾನೂನು ಸಲಹೆಗಾರರಾಗಿ ಚಿದಾನಂದ ಬೈಲಾಡಿ ಅವರನ್ನು ಆಯ್ಕೆ ಮಾಡಲಾಗಿದೆ.ಉಳಿದಂತೆ ಸೀತಾರಾಮ ಕೆ., ಗಂಗಾಧರ ಗೌಡ ಅಲುಂಬುಡ, ವಾಮನ ಎ.ವಿ, ಡಾ.ಅನುಪಮ, ರಾಮಣ್ಣ ಗೌಡ ಹಲಂಗ, ಗೌರಿ ಬನ್ನೂರು, ಜಯಪ್ರಕಾಶ್ ಗೌಡ ಕಳುವಾಜೆ, ಲತಾ ಎಸ್ ಗೌಡ, ಕೊರಗಪ್ಪ ಗೌಡ, ಪ್ರತಿಭಾದೇವಿ, ಪುಷ್ಪಾವತಿ ಕಳುವಾಜೆ, ಸೀತಾರಾಮ ಪೂಜಾರಿ ಮೇಲ್ಮಜಲು, ಅವಿನಾಶ್ ಗೌಡ ಕೆ.ಟಿ, ನರೇಂದ್ರ ಕೆ.ಟಿ ಗೌಡರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here