ಪುತ್ತೂರು ಸೂಪರ್ ಟವರ್ನಲ್ಲಿ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಉದ್ಘಾಟನೆ

0

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಸೂಪರ್ ಟವರ್ನಲ್ಲಿ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಮಾ. 20ರಂದು ಉದ್ಘಾಟನೆಗೊಂಡಿತು.

ಮಧು ಮನೋಹರ್ ಹಾಗೂ ಉದ್ಯಮಿ ಅಬ್ಬಾಸ್ ಹಜಿ ಕೊಯಿಲ ಮಳಿಗೆಯನ್ನು ಉದ್ಘಾಟಿಸಿದರು.

ಚಿತ್ರ: ಜೀತ್ ಪುತ್ತೂರು

ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಉದ್ಯಮ ಬೆಳೆದಾಗ ಪಟ್ಟಣ ಬೆಳೆಯುತ್ತದೆ. ಇದೀಗ 2ನೇ ಮಳಿಗೆಯನ್ನು ತೆರೆಯುತ್ತಿರುವ ಸಿಗ್ನೇಚರ್ ಮಳಿಗೆಗೆ ಉತ್ತಮ ಸ್ಪಂದನೆ ಜನರಿಂದ ಮೂಡಿಬರಲಿ ಎಂದು ಹಾರೈಸಿದರು.

ಉದ್ಯಮಿ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನ ಹೃದಯ ಭಾಗದಲ್ಲಿರುವ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ, ಪುರುಷರ ಅಭಿರುಚಿಗೆ ತಕ್ಕಂತಹ ಬಟ್ಟೆಗಳನ್ನು ನೀಡಲು ಉತ್ಸುಕವಾಗಿದೆ. ಪುತ್ತೂರಿನ ಜನರ ಅಭಿರುಚಿಗೆ ಪೂರಕವಾದಂತಹ ಬಟ್ಟೆಗಳನ್ನು ಒದಗಿಸುವ ಜೊತೆಗೆ, ಗ್ರಾಹಕರ ಮನೋಭಿಲಾಷೆಯನ್ನು ಈ ಸಂಸ್ಥೆ ಪೂರೈಸಲಿ. ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಂಸ್ಥೆಗೆ ದೊರಕಲಿ ಎಂದು ಶುಭಹಾರೈಸಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬ್ರಾಂಡೆಡ್ ಉತ್ಪನ್ನಗಳ ಮಳಿಗೆ ಪುತ್ತೂರಿಗೆ ಅಗತ್ಯವಿತ್ತು. ಪುತ್ತೂರಿನ ಮುಖ್ಯಪೇಟೆಯಲ್ಲೇ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಮೂಲಕ ಜನರ ಅಗತ್ಯತೆಯನ್ನು ಪೂರೈಸಲು ಮುಂದಾಗಿದೆ. ಪುತ್ತೂರಿನ ಹೃದಯ ಭಾಗದಲ್ಲಿ ಇಂತಹದ್ದೊಂದು ಬೃಹತ್ ಮಳಿಗೆಯನ್ನು ತೆರೆಯುವುದು ಸುಲಭದ ಮಾತಲ್ಲ. ಆದರೆ ಸಿಗ್ನೇಚರ್ ಮಳಿಗೆಯ ಪಾಲುದಾರರು ಸವಾಲಾಗಿ ಸ್ವೀಕರಿಸಿ, ಮುಂದಡಿ ಇಟ್ಟಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಪುತ್ತೂರಿನ ಜನರು ನಮ್ಮೂರಿನ ಮಳಿಗೆಯಲ್ಲೇ ಉತ್ಪನ್ನಗಳನ್ನು ಖರೀದಿಸಬೇಕು. ಇದರಿಂದ ಖರೀದಿಗಾಗಿ ದೂರದ ಊರಿಗೆ ಹೋಗುವ ಪ್ರಮೇಯ ತಪ್ಪುತ್ತದೆ. ಮಾತ್ರವಲ್ಲ, ನಮ್ಮೂರಿನಲ್ಲೇ ಉದ್ಯಮವನ್ನು ಬೆಳೆಸಿದಂತಹ ತೃಪ್ತಿಯೂ ನಮಗೆ ಸಿಗುತ್ತದೆ ಎಂದರು.

ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಮಾತನಾಡಿ, ಪ್ರಾಮಾಣಿಕತೆ ಹಾಗೂ ಸೇವೆ ಉದ್ಯಮದ ಯಶಸ್ಸಿನ ಸೂತ್ರಗಳು. ಇವನ್ನು ಅಳವಡಿಸಿಕೊಂಡು ಉದ್ಯಮದಲ್ಲಿ ಯಶಸ್ವಿಯಾಗಿ ಎಂದು ಶುಭಹಾರೈಸಿದರು.

ವರ್ತಕ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಮಾತನಾಡಿ, ಉದ್ಯಮವಾದರೂ ಅದರ ಹಿಂದೆ ಸೇವೆಯ ರೂಪ ಇರುತ್ತದೆ. ಆದ್ದರಿಂದ ಪುತ್ತೂರಿನ ಜನರು ಇಂತಹ ಉದ್ಯಮಕ್ಕೆ ಬೆಂಬಲ ನೀಡಬೇಕು ಎಂದ ಅವರು, ಇಲ್ಲಿ ತಾನೊಬ್ಬನೇ ಬೆಳೆಯಬೇಕು ಎಂಬ ಭಾವನೆಯ ಬದಲಾಗಿ, ನಮ್ಮ ಜೊತೆಗಿರುವವರು ಬೆಳೆಯಬೇಕು ಎನ್ನುವ ಭಾವನೆಯೇ ಮುಖ್ಯವಾಗಿರುತ್ತದೆ. ಎಲ್ಲರೂ ಜೊತೆಗೆ ಬೆಳೆದಾಗ, ಸಂಸ್ಥೆಯೂ ಬೆಳೆಯುತ್ತದೆ ಎಂದರು.

ಡಾ. ನಝಿರ್ ಅಹಮದ್ ಕ್ಲಿನಿಕ್ನ ಡಾ. ನಝೀರ್ ಅಹಮದ್ ಮಾತನಾಡಿ, ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲೇ ಇಂತಹ ಬೃಹತ್ ಮಳಿಗೆ ತೆರೆಯುವುದು ಸುಲಭದ ಮಾತಲ್ಲ. ಆದರೆ ಸಿಗ್ನೇಚರ್ ಸಂಸ್ಥೆಯ ಮಾಲಕರು ಅಂತಹ ಧೈರ್ಯವನ್ನು ತೋರಿಸಿದ್ದಾರೆ. ಇದೀಗ ಸಿಗ್ನೇಚರ್ ಸಂಸ್ಥೆಯ 2ನೇ ಮಳಿಗೆಯನ್ನು ಪುತ್ತೂರಿನಲ್ಲಿ ಆರಂಭಿಸುತ್ತಿದ್ದು, ಪುರುಷರಿಗೆಂದೇ ವಿಶೇಷವಾಗಿ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಪುತ್ತೂರಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಎಸ್.ಡಿ.ಪಿ.ಐ. ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್, ವಕೀಲರಾದ ನೂರುದ್ದೀನ್ ಸಾಲ್ಮರ, ಸಿದ್ದೀಕ್ ಕೆ.ಎಂ., ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಉಪ್ಪಿನಂಗಡಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು.ಟಿ. ತೌಸೀಫ್, ಮದರ್ ಇಂಡಿಯಾದ ಮಾಲಕ ಅಬ್ದುಲ್ ರಝಾಕ್. ವರ್ತಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ಡ್ಯಾಶ್ ಮಾರ್ಕೆಟಿಂಗಿನ ನಿಹಾಲ್ ಶೆಟ್ಟಿ, ಪ್ರಮುಖರಾದ ಇಸಾಕ್ ಸಾಲ್ಮರ, ಸಿದ್ದೀಕ್, ರಾಕೇಶ್ ರೈ ಪಡುಮಲೆ, ಉದ್ಯಮಿ ಶಬೀರ್ ಕೆಂಪಿ, ಉದ್ಯಮಿ ಹಸನ್ ಸಜ್ಜದ್ ಮೊದಲಾದವರು ಉಪಸ್ಥಿತರಿದ್ದರು.

ಸಿಯಾರಾಮ್, ಅರವಿಂದ್, ರೇಮಂಡ್, ಲಿನೆನ್ ಕ್ಲಬ್ ಬ್ರಾಂಡೆಡ್ ಕಂಪೆನಿಗಳ ಉಡುಗೆಗಳು ಇಲ್ಲಿ ಲಭ್ಯವಿದೆ. ಪುರುಷರ ಪ್ಯಾಂಟ್, ಶರ್ಟ್ಸ್, ಕುರ್ತಾ, ಪೈಜಾಮ್, ಕೋಟ್ಸ್, ಶೇರ್ವಾನಿ, ಸೂಟ್ಸ್, ಕಂದೂರ, ಜೋಧ್ ಪುರಿ, ಡ್ರೆಸ್ ಕೋಡ್ ಮೊದಲಾದ ಹಲವು ವಿನ್ಯಾಸದ ಬಟ್ಟೆಗಳು ಗ್ರಾಹಕರಿಗೆ ವಿಶೇಷ ದರದಲ್ಲಿ ಲಭ್ಯವಾಗಲಿದೆ ಎಂದು ಪಾಲುದಾರರಾದ ನಾಸಿರ್ ಕೊಯಿಲ, ಇಶಾಮ್ ಪರ್ಲಡ್ಕ, ಫಾರೂಕ್ ಸಾಲ್ಮರ, ಆಸೀಫ್ ಕೊಯಿಲ ತಿಳಿಸಿದ್ದಾರೆ.ರಿಯಾಜ್ ಇಂಡಿಯನ್ ಉಪ್ಪಿನಂಗಡಿ,ಹಮೀದ್ ಮುಕ್ವೆ,ಜಬ್ಬಾರ್ ಬೋಳುವರ್,ಉನೈಸ್ ಬಂಡಡ್,ರೆಹಮಾನ್ ಬಡಮೆ ಉಪ್ಪಿನಂಗಡಿ, ಹುಸೇನ್, ಹಂಝ, ಝಕರಿಯ,ಅಲಿ,ಸಿರಾಜ್, ನವಾಜ್ ಪಿಎಸ್ ಕೆರೆಮೋಳೆ,ನೌಫಲ್ ಸಾಲ್ಮರ,ತಾಜು ಫಟಾಫಟ್,ಆದಿಲ್ ಪರ್ಲಡ್ಕ,ಸುಹೇಲ್ ಹುಬಿಯೋ ಇಂಟೀರಿಯರ್,ತ್ವಾಹಿರ್ ಸೈಮನ್,ಇಮ್ತಿಯಾಜ್,ಶಾಹಿರ್,ಫಾರೂಕ್ ಐ ಮ್ಯಾಕ್ಸ್, ಸೈಫ್ ಪರ್ದ್ ಪ್ಯಾಲೇಸ್ ಮೊದಲಾದವರು ಬಂದು ನೂತನ ಸಂಸ್ಥೆಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here