ಮಾ.24-25: ಕುದ್ಕಾಡಿ ತರವಾಡು ಮನೆಯಲ್ಲಿ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಮತ್ತು ಶ್ರೀ ಧರ್ಮದೈವ ವರ್ಣಾರ ಪಂಜುರ್ಲಿ ಮತ್ತು ಪರಿವಾರದೈವಗಳ ನೇಮೋತ್ಸವ

0

ಬಡಗನ್ನೂರುಃ ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಮತ್ತು ಶ್ರೀ ಧರ್ಮದೈವ ವರ್ಣಾರ ಪಂಜುರ್ಲಿ ಮತ್ತು ಪರಿವಾರದೈವಗಳ ನೇಮೋತ್ಸವವು ಮಾ. 24 ಮತ್ತು 25 ರಂದು ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಮಹಾಲಿಂಗ ಭಟ್ಟರವರ ಸಹಭಾಗಿತ್ವದಲ್ಲಿ ಜರಗಲಿರುವುದು.

ಸದ್ರಿ ದೈವಿಕ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಪರಿವಾರ ಸಮೇತ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಕುದ್ಕಾಡಿ ಮನೆತನದ ಯಜಮಾನ ಬಾಲಕೃಷ್ಣ ರೈ ಕುದ್ಕಾಡಿ ಮತ್ತು ಕುದ್ಕಾಡಿ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮಗಳು:-

ಮಾ.24 ರಂದು ಬೆಳಗ್ಗೆ ಗಂ 8.30 ಕ್ಕೆ ಕುದ್ಕಾಡಿ ತರವಾಡು ಮನೆಯಲ್ಲಿ ಗಣಪತಿ ಹೋಮ, 9 ರಿಂದ ನಾಗದೇವರ ತಂಬಿಲ ಸೇವೆ,  11 ರಿಂದ ಹರಿಸೇವೆ. ಸಂಜೆ ಗಂ 6.30 ಕ್ಕೆ ದೇವಸ್ಥಾನದಿಂದ ಭಂಡಾರ ತೆಗೆಯುವುದು, ತೊಡಂಗಲ್ ನಂತರ ಮೇಲೇರಿ ಆಗ್ನಿಸ್ಪರ್ಶ. ರಾತ್ರಿ 8.30 ಕ್ಕೆ ಅನ್ನಸಂತರ್ಪಣೆ ಬಳಿಕ ಪೊಟ್ಟ ಭೂತದ ನೇಮ ನಡೆಯಲಿರುವುದು.

ಮಸ.25 ರಂದು ಪ್ರಾತಃಕಾಲ ಗಂ 4 ರಿಂದ ಶ್ರೀ ರಕ್ತೇಶ್ವರೀ ದೈವದ ನೇಮ ಮತ್ತು ಸಂಚಾರ ಗುಳಿಗ ದೈವದ ನೇಮ. ಸಂಜೆ ಗಂ 7.30 ಕ್ಕೆ ತರವಾಡು ಮನೆಯಿಂದ ಭಂಡಾರ ತೆಗೆಯುವುದು, ರಾತ್ರಿ ಗಂ 8.30 ಕ್ಕೆ ಅನ್ನಸಂತರ್ಪಣೆ. ರಾತ್ರಿ ಗಂ 9 ರಿಂದ ದೇವತೆ , ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಮತ್ತು ಸ್ಥಳದ ಗುಳಿಗ ದೈವಗಳ ನೇಮ ನಡೆಯಲಿರುವುದು.

ಮಾ.24 ರಂದು ರಾತ್ರಿ ಗಂ 8.30 ರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ

LEAVE A REPLY

Please enter your comment!
Please enter your name here