ಅಡೂರು ಕ್ಷೇತ್ರದ ಜಾತ್ರೋತ್ಸವದಲ್ಲಿ ಯಕ್ಷಗಾನ ತಾಳಮದ್ದಳೆ “ಸುಧಾನ್ವಾರ್ಜುನ”

0

ಈಶ್ವರಮಂಗಲ: ಅಡೂರು ಕ್ಷೇತ್ರ ಜಾತ್ರೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಡಿಮಹೋತ್ಸವದಂದು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಸುಧನ್ವಾರ್ಜುನ” ಯಕ್ಷಗಾನ ತಾಳಮದ್ದಳೆ ಜನ ಮನರಂಜಿಸಿತು.

ಭಾಗವತಿಕೆಯಲ್ಲಿ ಗಾನಕೋಗಿಲೆ ಕುಮಾರಿ ರಚನಾ ಪಂಜ ಹಾಗೂ ನಿತೀಶ್ ಕುಮಾರ ಯಂಕಣಮೂಲೆ ಇವರ ದ್ವಂದ್ವ ಹಾಡುಗಾರಿಕೆ ಉತ್ತಮವಾಗಿತ್ತು. ಚೆಂಡೆ ಮೃದಂಗವಾದನದಲ್ಲಿ ವಿಷ್ಣುಶರಣ ಬನಾರಿ ಮತ್ತು ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ, ಯಕ್ಷಗಾನ ಅಂಕಣಗಾರ ವೆಂಕಟ್ರಾಮ ಭಟ್ ಸುಳ್ಯ, ಬೆಳ್ಳಿಪ್ಪಾಡಿ ಸದಾಶಿವ ರೈ, ಗಣೇಶ್ ಶರ್ಮ ಸಿದ್ಧಕಟ್ಟೆ ಇವರ ಉತ್ತಮ ವಾದಮಂಡನೆ ಸಂಭಾಷಣೆಯೊಂದಿಗೆ ತಾಳಮದ್ದಳೆ ಕೂಟವು ಜನಮನ ರಂಜಿಸಿತು.

ಯಕ್ಷಗಾನ ಕೂಟಗಳ ಸಂಯೋಜಕ ಹಾಗೂ ಜಾತ್ರೋತ್ಸವ ಸಮಿತಿಯ ಉಪಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಸ್ವಾಗತಿಸಿ, ವಿವೇಕಾನಂದ ಅಡೂರು ವಂದಿಸಿದರು. ಬಾಲಕೃಷ್ಣ ಮಾಸ್ತರ್ ಅಡೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here