ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1,102 ಕೋಟಿ ಅನುದಾನ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ನೇತೃತ್ವದಲ್ಲಿ ವಿವಿಧ ಮೂಲಗಳಿಂದ ಅಭೂತವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ನಡೆಯುತ್ತಲೂ ಇದೆ. ಈ ಭಾಗದ ಎಲ್ಲಾ ಜನ ಸಾಮಾನ್ಯರನ್ನು, ಸಮುದಾಯವನ್ನು ಮಟ್ಟುವಲ್ಲಿ ಅವರ ಬೇಡಿಕೆಯಂತೆ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರು 1,102,47,34000 ಅನುದಾನ ತಂದಿದ್ದಾರೆ.

ಮೊದಲಿನ ಒಂದೂವರೆ ವರ್ಷ ವಿರೋಧ ಪಕ್ಷ, ಬಳಿಕ 2 ವರ್ಷ ಕೊರೋನಾ ಕಾಲಗಟ್ಟವನ್ನು ಸಮರ್ಪಕವಾಗಿ ಎದುರಿಸಿ ಉಳಿದ ಕೇವಲ 2 ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅನುದಾನ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಆರಂಭದಲ್ಲಿ ನಮ್ಮ ಶಾಸಕರು ಬಂದಾಗ ಸುಮಾರು ಒಂದೂವರೆ ತಿಂಗಳು ನಮ್ಮ ಸರಕಾರ ಇರಲಿಲ್ಲ. ಮುಂದೆ ಮೂರು ವರ್ಷ ವಿಪರೀತ ಮಳೆ, ಎರಡು ವರ್ಷಗಳ ಕಾಲ ಕೋವಿಡ್ ಸಮಸ್ಯೆಗಳು ಇದ್ದರೂ ಉಳಿದ ಎರಡು ವರ್ಷದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯ ನಡೆದಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ರೂ. 9 ಕೋಟಿ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 1.30 ಕೋಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.5.54 ಕೋಟಿ, ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ 2.50ಕೋಟಿ, ಲೋಕೋಪಯೋಗಿ ಇಲಾಖೆಯಿಂದ 119.7ಕೋಟಿ, ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ರೂ. 64 ಕೋಟಿ, ಪ್ರಧಾನಮಂತ್ರಿ ಸಡಕ್ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ರೂ. 58 ಕೋಟಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ರೂ. 51.96 ಕೋಟಿ, ರೈಲ್ವೇ ಮೇಲ್ಸೇತುವೆಗಳು, ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ. 19.39ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲನಿ ರಸ್ತೆ ಅಭಿವೃದ್ಧಿಗೆ 32.40 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ರೂ. 153 ಕೋಟಿ, ಜಲ್‌ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಯಿಂದ ರೂ. 60.43 ಕೋಟಿ, ಹಿಂದು ದಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ, ಇಂಟರ್‌ಲಾಕ್, ಸಂಪರ್ಕ ರಸ್ತೆಗಳು, ತಡೆಗೋಡೆ ಸಂರಕ್ಷಣಾ ಕಾರ್ಯಗಳಿಗೆ ರೂ. 18.57 ಕೋಟಿ, ಸರಕಾರಿ ವಿವಿಧ ಇಲಾಖೆ, ನ್ಯಾಯಾಲಯ ನೂತನ ಕಟ್ಟಡಗಳ ನಿರ್ಮಾಣಗಳಿಗೆ ರೂ. 69.46 ಕೋಟಿ, ಪುತ್ತೂರು ನಗರಸಭೆ, ವಿಟ್ಲ, ಪಟ್ಟಣ ಪಂಚಾಯತ್‌ಗಳಿಗೆ ರೂ. 167 ಕೋಟಿ, ಶಾಲೆ ಕಾಲೇಜು ಅಂಗನವಾಡಿ ಹಾಸ್ಟೇಲ್‌ಗಳಿಗೆ ರೂ. 117 ಕೋಟಿ, ಸಮುದಾಯ ಭವನ, ಅಂಭೇಡ್ಕರ್ ಭವನ ನಿರ್ಮಾಣಕ್ಕೆ ರೂ. 1.30 ಕೋಟಿ, ಮೆಸ್ಕಾಂ ಅಭಿವೃದ್ಧಿ ಯೋಜನೆಗಳಿಗೆ ರೂ. 26.26 ಕೋಟಿ, ಆರೋಗ್ಯ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ರೂ. 22.97ಕೋಟಿ, ತಾ.ಪಂ, ಜಿ.ಪಂ ವಿವಿಧ ಕಾಮಗಾರಿಗಳಿಗೆ ರೂ. 9.ಕೋಟಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ವಿತರಣೆಯಾದ ಅನುದಾನ ರೂ. 66.83 ಕೋಟಿ, ಇತರ 244 ಕೋಟಿ ಸಹಿತ ರೂ. 1,102 ಕೋಟಿ ಅನುದಾನ ಶಾಸಕರ ಮೂಲಕ ಲಭ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೆರಳೆ, ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here