ಪುತ್ತೂರಿನ ಜವುಳಿ ಉದ್ಯಮದಲ್ಲಿ ಎಂ.ಸಂಜೀವ ಶೆಟ್ಟಿ ಮಳಿಗೆಯ ಮತ್ತೊಂದು ಮೈಲುಗಲ್ಲು-ಬ್ರಾಂಡೆಡ್ ಉತ್ಪನ್ನಗಳ ನೂತನ ಶೋರೂಂ MSS-ALL EXCLUSIVE ಶುಭಾರಂಭ

0

ಪುತ್ತೂರು: ಜವುಳಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದಲ್ಲದೆ ಕಳೆದ ಸುಮಾರು 79 ವರ್ಷಗಳ ವಸ್ತ್ರ ಪರಂಪರೆಯನ್ನು ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಎಂ.ಸಂಜೀವ ಶೆಟ್ಟಿ ಸಿಲ್ಕ್ ರೆಡಿಮೇಡ್ಸ್‌ನವರ ನೂತನ ಶಾಖೆ ಬ್ರಾಂಡೆಡ್ ಡ್ರೆಸ್ ಮತ್ತು ಇತರ ವಸ್ತುಗಳ ಎಕ್ಸ್‌ಕ್ಲೂಸಿವ್ ಮಳಿಗೆ ಎಂಎಸ್‌ಎಸ್ ಆಲ್ ಎಕ್ಸ್‌ಕ್ಲೂಸಿವ್ ಮಾ.24ರಂದು ಮುಖ್ಯರಸ್ತೆ ಹಳೆ ಅಂಚೆ ಕಚೇರಿ ಬಳಿ ಶುಭಾರಂಭಗೊಂಡಿತು.


ಹಿರಿಯರಾದ ಸತೀಶ್ ಕುಮಾರ್, ರಾಜಶೇಖರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಸಂಚಾರಿ ಪೊಲೀಸ್ ಠಾಣಾ ಎಸ್.ಐ. ರಾಜಶೇಖರ ವಂದಲಿ, ಪೊಪ್ಯುಲರ್ ಸ್ವೀಟ್ಸ್ ಮ್ಹಾಲಕ ನರಸಿಂಹ ಕಾಮತ್ ಹಾಗೂ ಸಂಸ್ಥೆಯ ಹಿರಿಯ ಸಿಬ್ಬಂದಿಗಳಾದ ಮೀನಾ ಕುಮಾರಿ, ಬಾಬು ಗೌಡ, ಸುಂದರ ಗೌಡ, ಸುರೇಶ್, ಮೋನಪ್ಪ ದೀಪ ಬೆಳಗಿಸಿ ನೂತನ ಮಳಿಗೆಯನ್ನು ಉದ್ಘಾಟಿಸಿದರು.


ಸಂಚಾರಿ ಪೊಲೀಸ್ ಠಾಣಾ ಎಸ್.ಐ ರಾಜಶೇಖರ ವಂದಲಿ ಅವರು ಮಾತನಾಡಿ, ಸಂಜೀವ ಶೆಟ್ಟಿ ಜವುಳಿ ಮಳಿಗೆಗೆ ಒಂದು ಇತಿಹಾಸವಿದೆ. ಈ ಇತಿಹಾಸದಿಂದಾಗಿ ಮಳಿಗೆಯು ಯಶಸ್ವಿಯಾಗಿ ಬೆಳೆಯುತ್ತಾ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಹಾರೈಸಿದರು.


ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಜವುಳಿ ಉದ್ಯಮದಲ್ಲಿ ಸಂಜೀವ ಶೆಟ್ಟಿ ಮಳಿಗೆಯು ಮಾದರಿ ಸಂಸ್ಥೆಯಾಗಿ ತನ್ನದೇ ಛಾಪು ಮೂಡಿಸಿದೆ. ಅಂತಹ ಮಳಿಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಸಂಜೀವ ಶೆಟ್ಟಿ ಕುಟುಂಬಸ್ಥರು ಪುತ್ತೂರಿಗೆ ಇನ್ನಷ್ಟು ಕೊಡುಗೆ ನೀಡಿದ್ದಾರೆ. ಈ ಮಳಿಗೆಯು ಅಭಿವೃದ್ಧಿಯತ್ತ ಸಾಗಲಿ ಎಂದರು.


ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ಎಂ. ಸಂಜೀವ ಶೆಟ್ಟಿಯವರ ಸರಳತೆಯಿಂದಾಗಿ ಮಳಿಗೆಯು ಅಭಿವೃದ್ಧಿಯತ್ತ ಸಾಗಿದೆ. ಉದ್ಯಮವು ಜಿಲ್ಲೆ, ರಾಜ್ಯ ಮಟ್ಟಕ್ಕೂ ವ್ಯಾಪಿಸಲಿ ಎಂದು ಹೇಳಿದರು.


ಮಳಿಗೆಗೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಜವುಳಿ ಉದ್ಯಮದಲ್ಲಿ ಮಾದರಿಯಾಗಿದ್ದ ಸಂಜೀವ ಶೆಟ್ಟಿಯವರು ದಾನ, ಧರ್ಮದಲ್ಲಿಯೂ ಎತ್ತಿದ ಕೈಯಾಗಿದ್ದರು. ದ.ಕ ಜಿಲ್ಲೆಯಲ್ಲಿ ಜವುಳಿ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಸಂಜೀವ ಶೆಟ್ಟಿಯವರ ಹೆಸರಿನಲ್ಲಿಯೇ ಮುನ್ನಡೆಯುತ್ತಿರುವ ಸಂಸ್ಥೆಯು ಇಂದು ಮೂರನೇ ಮಳಿಗೆ ಪ್ರಾರಂಭಿಸಿ ಜನರಿಗೆ ಒಂದೇ ಸೂರಿನಡಿಯಲ್ಲಿಯೇ ಎಲ್ಲಾ ಮಾದರಿ ಬಟ್ಟೆಗಳನ್ನು ಒದಗಿಸಿದ್ದಾರೆ. ಮಳಿಗೆಯಲ್ಲಿ ಆಧುನಿಕ ಜೀವನಕ್ಕೆ ಪೂರಕವಾದ ಕಾಸ್ಮೆಟಿಕ್ ಉತ್ಪನ್ನಗಳೂ ಜನರಿಗೆ ಒಂದೇ ಕಡೆ ದೊರೆಯುತ್ತಿದ್ದು ಪುತ್ತೂರಿನ ಜನತೆಗೆ ಸ್ಮಾರ್ಟ್ ಆಗಲು ಸಹಕಾರಿಯಾಗಿದೆ ಎಂದರು.


ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಜವುಳಿ ಉದ್ಯಮದಲ್ಲಿ ಹೆಸರಾಂತ ಮಳಿಗೆಯಾಗಿರುವ ಸಂಜೀವ ಶೆಟ್ಟಿ ಮಳಿಗೆಯು ಜಿಲ್ಲೆ, ರಾಜ್ಯಕ್ಕೆ ವ್ಯಾಪಿಸಿದೆ. ಈ ಮಳಿಗೆಯು ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ ಎಂದು ಹೇಳಿದರು.


ಸನ್ಮಾನ:
ಸಂಸ್ಥೆಯಲ್ಲಿ ಕಳೆದ 35 ವರ್ಷಗಳಿಂದ ಸಿಬ್ಬಂದಿಗಳಾಗಿರುವ ಮೀನಾ ಕುಮಾರಿ, ಬಾಬು ಗೌಡ, ಸುಂದರ ಗೌಡ, ಸುರೇಶ್, ಮೋನಪ್ಪರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.


ಸನ್ಮಾನ ಸ್ವೀಕರಿಸಿದ ಹಿರಿಯ ಸಿಬಂದಿ ಮೀನಾ ಕುಮಾರಿ ಹಾಗೂ ಸಹನಾ ಸಂಸ್ಥೆಯ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರು.
ಸಂಜೀವ ಶೆಟ್ಟಿ ಕುಟುಂಬಸ್ಥರಾದ ಮುರಳೀಧರ್, ಗಿರಿಧರ್, ಮನೋಹರ್, ಶಿವಶಂಕರ್, ಸೂರಜ್, ಕೀರ್ತನ್, ಸುಶಾಂತ್, ನರೇಂದ್ರ, ಮಹೇಂದ್ರ, ನಮೃತಾ, ಡಾ.ಲಿಖಿತಾ, ಡಾ.ಹರಿಣಿ, ರಜನಿ, ವಿದ್ಯಾ, ಇಂದು ಹಾಗೂ ಅಶ್ವಿತಾ ಉಪಸ್ಥಿತರಿದ್ದರು. ಶ್ರೀಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರಿಣಿ ಸೂರಜ್ ಶೆಟ್ಟಿ ವಂದಿಸಿದರು.

ನೂತನ ಮಳಿಗೆಯು ಒಟ್ಟು ಮೂರು ಅಂತಸ್ತುಗಳನ್ನು ಹೊಂದಿದೆ. ಕಾಸ್ಮೆಟಿಕ್, ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಒಳಗೊಂಡಿದೆ. ನೆಲ ಅಂತಸ್ತಿನಲ್ಲಿ ಕಾಸ್ಮೆಟಿಕ್ಸ್, ಹ್ಯಾಂಡ್‌ಬ್ಯಾಗ್, ನ್ಯೂಬಾರ್ನ್ ಡ್ರೆಸಸ್, ಮಕ್ಕಳ ಆಟಿಕೆಗಳು, ಟಾಯ್ಸ್ ಲಭ್ಯವಿದೆ. ಪ್ರಥಮ ಮಹಡಿಯಲ್ಲಿ ಲೇಡಿಸ್ ಎತ್ನಿಕ್ ವೇರ್, ಮೆನ್ಸ್ ಫಾರ್ಮಲ್, ಕ್ಯಾಶುವಲ್ ವೇರ್, ಎರಡನೇ ಮಹಡಿಯಲ್ಲಿ ಮೆನ್ಸ್ ಎತ್ನಿಕ್ ವೇರ್, ಟ್ರಾವೆಲ್ ಬ್ಯಾಗ್ ಮತ್ತು ಗೃಹಾಲಂಕಾರಿಕಾ ವಸ್ತುಗಳು ಗ್ರಾಹಕರಿಗೆ ಲಭ್ಯವಿದೆ. ಬ್ರಾಂಡೆಡ್ ಬ್ಯಾಗ್, ಒಳಉಡುಪು, ಟೀ-ಶರ್ಟ್, ಶರ್ಟ್, ಮದುವೆ ಉಡುಪುಗಳು, ಮಕ್ಕಳ ಉಡುಪುಗಳ ಪ್ರತ್ಯೇಕ ಪ್ರತ್ಯೇಕ ವಿಭಾಗಗಳನ್ನು ಒಳಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here