ಮಾ.25; ನಿಡ್ಪಳ್ಳಿ ಗುರಿಬಾರಿಕೆ ಧರ್ಮಚಾವಡಿಯಲ್ಲಿ ನೆಮೋತ್ಸವ

0

  ನಿಡ್ಪಳ್ಳಿ; ಗುರಿಬಾರಿಕೆ – ಹೊಸಮನೆ ಧರ್ಮ ದೈವ ಸೇವಾ ಟ್ರಸ್ಟ್ ವತಿಯಿಂದ ಗುರಿಬಾರಿಕೆ ಧರ್ಮಚಾವಡಿಯಲ್ಲಿ ಶ್ರೀ ಕ್ಷೇತ್ರದ ಶ್ರೀ ಸತ್ಯಗಳಿಗೆ ನೆಮೋತ್ಸವ ಕಾರ್ಯಕ್ರಮ ಮಾ.25 ರಂದು ಸಾಯಂಕಾಲ ಗಂಟೆ 4 ರಿಂದ ನಡೆಯಲಿದೆ.

     ಸಾಯಂಕಾಲ ಗಂಟೆ 4 ರಿಂದ ಧರ್ಮಚಾವಡಿಯಲ್ಲಿ ತಂಬಿಲ ಸೇವೆ, ಗಂಟೆ 5 ರಿಂದ ದೈವಗಳ ಭಂಡಾರ ಕೊಡಿಯಡಿಗೆ ಆಗಮನ ನಂತರ ರಾತ್ರಿ 7.30 ರಿಂದ ಅನ್ನಸಂತರ್ಪಣೆ. ರಾತ್ರಿ ಗಂಟೆ 8 ರಿಂದ ಕೊರತಿ ಮತ್ತು ಕಲ್ಲುರ್ಟಿ ದೈವಕ್ಕೆ ನೆಮೋತ್ಸವ. ರಾತ್ರಿ ಗಂಟೆ 11.30 ಕ್ಕೆ ನಿಡ್ಪಳ್ಳಿ ಸಾರಾಳ ಪಟ್ಟದ ಅರಸರ ಆಗಮನ ಮತ್ತು ಗೌರವ ಸಮರ್ಪಣೆ.ರಾತ್ರಿ ಗಂಟೆ 12 ರಿಂದ ಧರ್ಮ ದೈವ ವರ್ಣರ ಪಂಜುರ್ಲಿ ದೈವದ ನೆಮೋತ್ಸವ. ಬೆಳಿಗ್ಗೆ ಗಂಟೆ 5 ರಿಂದ ದೈವರಾಜ ರಾವು ಮತ್ತು ದೈವರಾಜ ಗುಳಿಗ  ದೈವಗಳಿಗೆ ನೆಮೋತ್ಸವ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ರಾಧಾಕೃಷ್ಣ ಏಳಡ್ಕ ರಾಮಣ್ಣ ರೈ ಹೊಸಮನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here