ಪಾಣಾಜೆ; ವಿವಾಹ ರಜತ ಸಂಭ್ರಮ ಆಚರಣೆ-ತ್ರೀಶಕ್ತಿ ಪರಿಣಯ ಯಕ್ಷಗಾನ ಬಯಲಾಟ

0

ನಿಡ್ಪಳ್ಳಿ; ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ಬಾಮೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ ಇವರಿಂದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಎಡನೀರು ಮಠಾದೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಆರ್ಲಪದವು ದೈವಸ್ಥಾನದ ವಠಾರದಲ್ಲಿ ಜಯಲಕ್ಷ್ಮಿ ಮತ್ತು ಸತ್ಯನಾರಾಯಣ ಅಡಿಗ ಇವರ ವಿವಾಹದ ರಜತ ಸಂಭ್ರಮಾಚರಣೆಯ ಪ್ರಯುಕ್ತ ಮಾ.19 ರಂದು ನಡೆಯಿತು.

 ಎಡನೀರು ಮಠಾದೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ ದಂಪತಿಗಳನ್ನು ಹರಸಿದರು.ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವರದರಾಜ ಚಂದ್ರಗಿರಿ, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಕಹಳೆ ನ್ಯೂಸ್ ನ ವ್ಯವಸ್ಥಾಪಕ ಶ್ಯಾಂ ಸುದರ್ಶನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವೇದಮೂರ್ತಿ  ಗೋಪಾಲಕೃಷ್ಣ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾರಾಯಣ ಅಡಿಗ ವಂದಿಸಿದರು.ಅನನ್ಯ ಅಡಿಗ ಕಾರ್ಯಕ್ರಮ ನಿರೂಪಿಸಿದರು.ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು

ಗೌರವ ಸನ್ಮಾನ ಕಾರ್ಯಕ್ರಮ- ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಹಾಗೂ ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

 ಬಿ.ಬಿ.ಕ್ರಿಯೇಶನ್ ಪಾಣಾಜೆ ಇವರ ವತಿಯಿಂದ ವಿವಾಹದ ರಜತ ಸಂಭ್ರಮ ಆಚರಿಸುತ್ತಿರುವ ಅಡಿಗ ದಂಪತಿಯನ್ನು ಗೌರವಿಸಿದರು.ಅಲ್ಲದೆ ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮಕ್ಕೆ ಆಗಮಿಸಿ ದಂಪತಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here