ಮುಂದೆಯೂ ಉಳಿದ ಕಾಮಗಾರಿಗೂ ಅನುದಾನ ಭರವಸೆ- ಸಂಜೀವ ಮಠಂದೂರು
ಕೋಟಿ ಕೋಟಿ ಅನುದಾನ ನೀಡಿದ ಏಕೈಕ ಶಾಸಕರು – ಕೆ ಜೀವಂಧರ್ ಜೈನ್
ಪುತ್ತೂರು : ಶಾಸಕರ ಅನುದಾನದಲ್ಲಿ ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಆವರಣಕ್ಕೆ ರೂ. 5 ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಕೆಯ ಶಿಲಾನ್ಯಾಸ ಕಾರ್ಯಕ್ರಮ ಮಾ.26 ರಂದು ನಡೆಯಿತು. ಈ ಸಂದರ್ಭ ಮಂದಿರದಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಇಂಟರ್ ಲಾಕ್ ಶಿಲಾನ್ಯಾಸ ನೆರವೇರಿಸಿದ ನಮ್ಮ ಶಾಸಕರೇ ಮುಂದೆ ಉದ್ಘಾಟನೆಯನ್ನು ಮಾಡುವಂತಾಗಲಿ ಎಂದು ಅರ್ಚಕರು ಮತ್ತು ಮಂದಿರದಲ್ಲಿ ಉಪಸ್ಥಿತರಿದ್ದರವರು ಪ್ರಾರ್ಥನೆ ಮಾಡಿರುವುದು ವಿಶೇಷವಾಗಿತ್ತು.
ಮುಂದೆಯೂ ಉಳಿದ ಕಾಮಗಾರಿಗೂ ಅನುದಾನ ಭರವಸೆ:
ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಧಾನಿಯವರು ಹೇಳಿದ ಒಳ್ಳೆಯ ದಿನ ಇವತ್ತು ಎಲ್ಲಾ ಕಡೆ ಕಾಣುತ್ತಿದೆ. ಧರ್ಮದ ಕಾರ್ಯಕ್ಕೆ ಪೂರ್ವಜರ ಚಿಂತನೆಯಂತೆ ದೈವಸ್ಥಾನ, ದೇವಸ್ಥಾನ ಮಂದಿರಗಳು ಜೀರ್ಣೋದ್ದಾರ ಆಗಬೇಕು. ಈ ನಿಟ್ಟಿನಲ್ಲಿ ಭಜನಾ ಮಂದಿರ, ದೈವಸ್ಥಾನ, ದೇವಸ್ಥಾನಗಳು ಅಭಿವೃದ್ದಿ ಹೊಂದಬೇಕು. ಶಿವ ಪಾರ್ವತಿ ಮಂದಿರ ಧಾರ್ಮಿಕತೆಗೆ ಮಾತ್ರವಲ್ಲ ಕೇಂದ್ರವಾಗದೆ ಹಿಂದು ಸಮಾಜದ ಸಂಘಟನೆಯ ಕೇಂದ್ರವಾಗಿದೆ ಎಂದರು.
ಕೋಟಿ ಕೋಟಿ ಅನುದಾನ ನೀಡಿದ ಏಕೈಕ ಶಾಸಕರು:
ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಅವರು ಮಾತನಾಡಿ ನಮ್ಮ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿಯಲ್ಲಿ ಕೋಟಿ ಕೋಟಿ ಅನುದಾನ ನೀಡಿದ್ದರಿಂದ ನಗರಸಭೆ ಸದಸ್ಯರು ತಲೆ ಎತ್ತಿ ನಿಲ್ಲುವಂತಾಗಿದೆ ಎಂದರು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯರಾದ ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ಮಂದಿರ ಅಧ್ಯಕ್ಷ ವಿಶ್ವನಾಥ ಗೌಡ, ದಿಶಾ ನಾಮ ನಿರ್ದೇಶಿತ ಸದಸ್ಯ, ಮೆಸ್ಕಾಂ ನಿವೃತ್ತ ಇಂಜಿನಿಯರ್ ಶೇಷಪ್ಪ ಪೂಜಾರಿ, ಚಂದ್ರಶೇಖರ್ ನಂದಿಲ, ಮೋಹನ್ ಜೈನ್, ರಮೇಶ್ ಗೌಡ, ಜಯರಾಮ ಗೌಡ, ಸಂಜೀವ ಪೂಜಾರಿ, ಶೇಖರ್ ಬಿರ್ವ, ಸರೋಜ, ತುಳಸಿ, ಮಮತಾ, ವೀಣಾ ಪೂಜಾರಿ, ಕೃಷ್ಣ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.