ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೆಮ್ಮಿಂಜೆ ನಿವಾಸಿ ವಿಘ್ನೇಶ್

0

ಪುತ್ತೂರು : ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕೆಮ್ಮಿಂಜೆ ಗ್ರಾಮದ ಲಕ್ಷ್ಮೀ ವೆಂಕಟರಮಣ ಲೇಔಟ್‌ ನಿವಾಸಿ ವಿಠ್ಠಲ ಕಾಮತ್‌ ಎಂಬವರ ಪುತ್ರ ವಿಘ್ನೇಶ್‌ ಕಾಮತ್‌ (29) ಎಂದು ಗುರುತಿಸಲಾಗಿದೆ. ಮೃತ ವಿಘ್ನೇಶ್‌ ಪುತ್ತೂರು ಕೋರ್ಟ್‌ ರಸ್ತೆಯಲ್ಲಿ ಅಂಗಡಿ ಹೊಂದಿದ್ದು ಅಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿರುವ ವಿಘ್ನೇಶ್‌ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಎರಡು ತಿಂಗಳ ಹಿಂದೆ ವಿಘ್ನೇಶ್‌ ವಿಷ ಪ್ರಾಶನ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ ಬದುಕುಳಿದಿದ್ದರು. ಇಂದು ಬೆಳಿಗ್ಗೆ 11 ಗಂಟೆ ವೇಳೆ ಹೊರಗೆ ಹೋಗಿ ಬರುವುದಾಗಿ ಅಮ್ಮನ ಕೈಯಿಂದ 500ರೂ ಪಡೆದು ಹೊರಹೋಗಿದ್ದ ವಿಘ್ನೇಶ್‌ ಹೆಣವಾಗಿ ನೇತ್ರಾವತಿಯಲ್ಲಿ ಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here