ಕೇಂದ್ರ, ರಾಜ್ಯ ಸರಕಾರದಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ – ಸಂಜೀವ ಮಠಂದೂರು
ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸಿಸ್ ಘಟಕ, ಪ್ರಯೋಗ ಶಾಲಾ ಉಪಕರಣಗಳ ಉದ್ಘಾಟನೆ ಮಾ.27 ರಂದು ನಡೆಯಿತು.
ಶಾಸಕ ಸಂಜೀವ ಮಠಂದೂರುರವರು ನವೀಕೃತ ಡಯಾಲಿಸಿಸ್ ಘಟಕ ಮತ್ತು ಪ್ರಯೋಗ ಶಾಲಾ ಉಪಕರಣಗಳ ಉದ್ಘಾಟನೆಯನ್ನು ನೆರವೇರಿಸಿದರು.
ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ, ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ರೋಟರಿ ಎಲೈಟ್ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕಾಮಗಾರಿ ಇಂಜಿನಿಯರ್ ರಾಜೇಶ್ ರೈ, ಆಸ್ಕರ್ ಆನಂದ್, ವಿಶ್ವಾಸ್ ಶೆಣೈ, ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಕೃಷ್ಣ ನಾಯ್ಕ್, ರಾಜೇಶ್ ಬನ್ನೂರು, ಡಾ.ಕೃಷ್ಣ ಪ್ರಸನ್ನ, ರಫೀಕ್, ಅಸ್ಪತ್ರೆಯ ವೈದ್ಯರಾದ ಡಾ.ವಿಶ್ವನಾಥ್, ಡಾ.ಯದುರಾಜ್, ಡಾ.ಜಯ ಕುಮಾರಿ ಡಾ ಜಯದೀಪ್ಟ, ಡಾ ಶ್ವೇತಾ, ಆಡಳಿತಾಧಿಕಾರಿ ಯೋಗಾನಂದ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅಶಾ ಪುತ್ತೂರಾಯ ಉಪಸ್ಥಿತರಿದ್ದರು.
ಚಂದ್ರಕಲಾ ಮತ್ತು ಬಳಗ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಸ್ವಾಗತಿಸಿದರು.