ಸಾಲೆತ್ತೂರು: ಮೆದು ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ನಗದು ಪತ್ತೆ

0

ವಿಟ್ಲ: ದಾಖಲೆ ರಹಿತವಾಗಿ ಸಾಗಾಟ ಮಾಡುತ್ತಿದ್ದ ನಗದು ಸಹಿತ ಓರ್ವ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಚೆಕ್ ಪೋಸ್ಟ್ ನಲ್ಲಿ ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌.

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟೆ ನಿವಾಸಿ ಮಹಮ್ಮದ್ ರವರ ಪುತ್ರ ಬಶೀರ್ (29 ವ.)ಪೊಲೀಸರ ವಶವಾದ ವ್ತಕ್ತಿಯಾಗಿದ್ದಾರೆ‌.

ಮಾ. 26ರಂದು ವಿಟ್ಲ ಪೊಲೀಸ್ ಠಾಣಾ ಎಸ್ ಐ ಸಂದೀಪ್‌ ಕುಮಾರ್‌ ಶೆಟ್ಟಿರವರು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿರುವ ಕರ್ನಾಟಕ ರಾಜ್ಯದ ಚುನಾವಣೆ ಪ್ರಯುಕ್ತ ತೆರದ ಅಂತರಾಜ್ಯ ಚೆಕ್‌ ಪಾಯಿಂಟ್‌ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಾಲೆತ್ತೂರು ಭಾಗದಿಂದ ಬಾಕ್ರಬೈಲು ಕಡೆಗೆ ತೆರಳುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ರೂಪಾಯಿ 1,50,000 ಹಣ ಪತ್ತೆಯಾಗಿದ್ದು ಹಣದ ಬಗ್ಗೆ ವಿಚಾರಿಸಿದಾಗ ಹಣಕ್ಕೆ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದರಿಂದ ನಗದು ಹಣ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here