ಮಾ.30ಕ್ಕೆ ಲೇಖಕ ಅನಿಂದಿತ್ ಗೌಡರವರ ಇ-ಪುಸ್ತಕ ಲೋಕಾರ್ಪಣೆ

0

ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಕಟಿತ ’ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದ ಲೇಖಕ ಅನಿಂದಿತ್ ಕೊಚ್ಚಿ ಬಾರಿಕೆ ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಳಕ್ಕೂ ಭಾರತ ಸ್ವಾತಂತ್ರ್ಯ ಹೋರಾಟ ಹಾಗೂ 1837ನೇ ಇಸವಿಯಲ್ಲಿ ತುಳುನಾಡಿನಲ್ಲಿ ನಡೆದ ಅಮರ ಸುಳ್ಯ ಮಹಾ ಕ್ರಾಂತಿಗೂ ಇರುವ ಅವಿನಾಭಾವ ಸಂಬಂಧದ ಕುರಿತಂತೆ ದಾಖಲೆಗಳನ್ನು ಕನ್ನಡ ಅನುವಾದದಲ್ಲಿ ಪ್ರಸ್ತುತ ಪಡಿಸುವ ಕಿರು ಇ-ಪುಸ್ತಕ, ’ಪುತ್ತೂರಿನಲ್ಲಿ ಅಂದು ನಡೆದದ್ದು ಏನು?’ ಮಾ.30ರಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆಯ ಬಳಿಕ ಬಿಡುಗಡೆಗೊಳ್ಳಲಿದೆ ಎಂದು ಲೇಖಕ ಅನಿಂದಿತದ ಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಗಳ ಪ್ರಕಾರ, 1837ರ ಮಾ.30ರಂದು ಪುತ್ತೂರಿನಲ್ಲಿ ಜಮಾಬಂದಿಯ ದಿನವಾಗಿದೆ. ಈಸ್ಟ್ ಇಂಡಿಯಾ ಕಂಪನಿ ಸರಕಾರದ ಕೆನರಾದ ಶಿರಸ್ತೇದಾರರ ಮುಖ್ಯಸ್ಥರಾಗಿದ್ದ ದೇವಪ್ಪ ಎಂಬವರು ಅಂದಿನ ಕಲೆಕ್ಟರ್ ಎಂ. ಲೆವಿಸ್ ಅವರ ಉಪಸ್ಥಿತಿಯಲ್ಲಿ ಊರ ಜನರ ಮುಂದೆ ಹಣ ರೂಪದ ಕಂದಾಯದ ಒತ್ತಾಯ ಹೇರಿದ್ದ ಸಂಭಾಷಣೆ ಸಮೇತ ವಿವರಗಳಿವೆ. ಇದಕ್ಕಾಗಿ ಊರಿನ ಜನರೆಲ್ಲಾ ಸೇರಿ ಅವರನ್ನು ಬಂಧಿಸಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸರಕಾರದ 150 ಸಿಪಾಯಿಗಳನ್ನು ಇಲ್ಲಿಂದ ಬೆನ್ನಟ್ಟಿದ ಸ್ಪಷ್ಟ ದಾಖಲೆಗಳು ಲಭ್ಯವಾಗಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ, ಲಂಡನ್ನಿನ ನ್ಯಾಶನಲ್ ಆರ್ಮಿ ಮ್ಯೂಸಿಯಂ ಸಹಕರಿಸಿದ್ದಂತಹ ’ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದಲ್ಲಿ ದಾಖಲೆ ಸಮೇತ ಈಗಾಗಲೇ ಆಂಗ್ಲ ಭಾಷೆಯಲ್ಲಿ ಪ್ರಕಟಗೊಂಡಿದೆ. ತನ್ನ ಬಿಡುಗಡೆಯ ಒಂದು ತಿಂಗಳ ಪೂರೈಕೆಯ ಒಳಗೆಯೇ ಮಂಗಳೂರಿನಿಂದ ವಿಶ್ವದ ಅತ್ಯಂತ ಎತ್ತರದ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ’ಉಮ್ಮಿಂಗ್ – ಲಾ’ ಪಾಸ್ ವರೆಗೆ ರಸ್ತೆ ಮೆರವಣಿಗೆ ಹೋಗುವ ಮೂಲಕ ದಾಖಲೆ ನಿರ್ಮಿಸಿದೆ.

ಪುತ್ತೂರಿನ ಮಹಾಜನತೆಗೆ ಮತ್ತೊಮ್ಮೆ ಈ ಮಣ್ಣಲ್ಲಿ ಎಲ್ಲರನ್ನು ಒಗ್ಗೂಡಿಸಿ ನಡೆದಿದ್ದ ಚರಿತ್ರೆಯನ್ನು ಮರುನೆನಪಿಸುವ ಸಲುವಾಗಿ ಅದೇ ದಿನದಂದು ’ಚರಿತ್ರೆಯ ಅರಿವು ಮೂಡಿಸುವ ಸಲುವಾಗಿ ಸಾಹಿತ್ಯ ? ಅಧ್ಯಯನದೊಂದಿಗೆ ಅಧುನಿಕತೆಯನ್ನು ಒಗ್ಗೂಡಿಸಿ ಜನರಿಗೆ ಚರಿತ್ರೆಯ ವಿಚಾರ ತಿಳಿಸುವುದಾಗಿ ಲೇಖಕ ಅನಿಂದಿತ ಗೌಡ ಅಭಿವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಜಾನಪದದಲ್ಲಿ ಆಗಾಗ್ಗೆ ಉಲ್ಲೇಖಗಳು ಬಿಟ್ಟರೆ, 30 ಮಾರ್ಚ್ 1837ರಂದು ನಿಜವಾಗಿಯೂ ನಡೆದದ್ದು ಏನು ಯಾತಕ್ಕಾಗಿ, ಅಂದಿನ ಪ್ರಸ್ತುತತೆ ಮತ್ತು ಹೇಗೆಲ್ಲಾ ಬೆಳವಣಿಗೆಗಳು ನಡೆಯಿತು ಎಂಬುದರ ಬಗ್ಗೆ ನಿಖರತೆ ಇರಲಿಲ್ಲ. ಆದರೆ ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ’ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕದಲ್ಲಿ ಉಲ್ಲೇಖಗೊಂಡಿರುವ ದಾಖಲೆಗಳು 186 ವರ್ಷಗಳ ಹಿಂದೆ ಪ್ರತ್ತೂರಿನಲ್ಲಿ ಆ ದಿನ ಏನು ನಡೆದಿತ್ತು ಎಂಬ ಇತಿಹಾಸವನ್ನು ಬೆಳಕಿಗೆ ತಂದು, ಓದು – ಬರಹ ಬಲ್ಲವರದುರುಗಡೆ ಚರಿತ್ರೆಯ ಪುಟಗಳು (ಆಂಗ್ಲ ಭಾಷೆಯಲ್ಲಿ) ಪ್ರತ್ಯಕ್ಷದರ್ಶಿಗಳಾಗಿ ತೆರೆದಿಡುತ್ತವೆ ಎಂದು ಅವರು ವಿವರಿಸಿದರು.

LEAVE A REPLY

Please enter your comment!
Please enter your name here