ಉಪ್ಪಿನಂಗಡಿ: ಉಪ್ಪಿನಂಗಡಿ ಪೃಥ್ವಿ ಶಾಪಿಂಗ್ ಮಾಲ್‌ನಲ್ಲಿರುವ ಎಸ್‌ಬಿಐ ಗ್ರಾಹಕರ ಸೇವಾಕೇಂದ್ರದಲ್ಲಿ ’ಡಿಟಿಡಿಸಿ’ ಕೊರಿಯರ್ ಮಾ.27ರಂದು ಶುಭಾರಂಭಗೊಂಡಿತು.
ಡಿಟಿಡಿಸಿ ಚಾನಲ್ ಮ್ಯಾನೇಜರ್ ಆನಂದ ಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಡಿಟಿಡಿಸಿ ಕೊರಿಯರ್ ಸೇವೆ ದೇಶ ಹಾಗೂ ವಿದೇಶಗಳಲ್ಲಿಯೂ ಇದೆ. ದೇಶಾದ್ಯಂತ ಸುಮಾರು 14ಸಾವಿರ ಶಾಖೆ ಹೊಂದಿದ್ದು ತ್ವರಿತ ಸೇವೆ ನೀಡುವ ಮೂಲಕ ಗ್ರಾಹಕರ ವಿಶ್ವಾಸ ಪಡೆದುಕೊಂಡಿದೆ. ಸುಮಾರು 13 ಸಾವಿರಕ್ಕೂ ಹೆಚ್ಚು ಮಂದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಪ್ಪಿನಂಗಡಿಯ ಜನತೆಗೂ ಅತ್ಯುತ್ತಮ ರೀತಿಯ ಸೇವೆ ನೀಡುವ ಸಲುವಾಗಿ ಸೇವೆ ಆರಂಭಿಸಲಾಗಿದೆ. ಗ್ರಾಹಕರು ಸಹಕಾರ ನೀಡುವುದರೊಂದಿಗೆ ಸಂಸ್ಥೆಯನ್ನು ಬೆಳೆಸಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ. ಶುಭಹಾರೈಸಿದರು. ಉಪ್ಪಿನಂಗಡಿ ಕಾರ್ತಿಕ್ ಸ್ಟುಡಿಯೋದ ಗೋವಿಂದ ಎನ್.ಪಿ., ಭವ್ಯ, ಧ್ರುವಿ ಬ್ಯೂಟಿಪಾರ್ಲರ್‌ನ ನಾಗವೇಣಿ, ಶಶಿಕಲಾ, ಮಾನಸ ಗಂಗಾ ಸಹಕಾರ ಸಂಘದ ಮೆನೇಜರ್ ಶಿಲ್ಪಾ, ಸಿಬ್ಬಂದಿ ಸುಮಿತ್ರಾ, ತನ್ವಿ ಪಾರ್ಲರ್‌ನ ಉಷಾಕಿರಣ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಕೋರಿದರು.
ಮಾಲಕ ಹರಿಕೃಷ್ಣ ಅವರು ಮಾತನಾಡಿ, ಡಿಟಿಡಿಸಿ ಕೊರಿಯರ್ ಸೇವೆಯು ಭಾರತದೊಳಗೆ ಹಾಗೂ ವಿದೇಶಗಳಿಗೂ ಇದೆ. ಜೊತೆಗೆ ಇ-ಕಾಮರ್ಸ್, 3ಪಿಎಲ್, ಫುಲ್‌ಫಿಲ್‌ಮೆಂಟ್, ಡಿಸ್ಟ್ರಿಬ್ಯೂಷನ್ ಸೊಲ್ಯುಷನ್ಸ್ ಸೇವೆಯೂ ಇದೆ. ಇಲ್ಲಿ ಎಸ್‌ಬಿಐ ಗ್ರಾಹಕರ ಸೇವಾಕೇಂದ್ರವೂ ಇದ್ದು ಬ್ಯಾಂಕ್ ಖಾತೆ ತೆರೆಯುವುದು/ ಇಕೆವೈಸಿ, ಹಣ ಜಮೆ, ಹಣ ತೆಗೆಯುವುದು, ಆರ್‌ಡಿ ಖಾತೆ, ಫಿಕ್ಸೆಡ್ ಡೆಪೊಸಿಟ್, ಹಣ ವರ್ಗಾವಣೆ, ಸೊಷಿಯಲ್ ಸೆಕ್ಯುರಿಟಿ ಸ್ಕೀಮ್, ಎಇಪಿಎಸ್/ಎಟಿಎಂ ಟ್ರಾನ್ಸ್ಯಾಕ್ಷನ್, ಆಧಾರ್/ಮೊಬೈಲ್ ನಂಬರ್ ಸೀಡಿಂಗ್, ಲೋನ್ ಎಕೌಂಟ್ ಡೆಪೊಸಿಟ್ ಸೌಲಭ್ಯವೂ ಇದೆ. ಜೆರಾಕ್ಸ್, ಪಾನ್‌ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋಟ್, ವೋಟರ್ ಐಟಿ, ಆಧಾರ್ ಕಾರ್ಡ್, ಲೇಬರ್ ಕಾರ್ಡ್, ವಿಧವಾ ವೇತನ, ಆಯುಷ್ಮಾನ್ ಕಾರ್ಡ್, ಉದ್ಯೋಗ ಆಧಾರ್, ಆರ್‌ಟಿಸಿ ಪ್ರಿಂಟ್, ಸ್ಕಾಲರ್‌ಶಿಪ್, ಇ ಶ್ರಮ ಕಾರ್ಡ್, ವೆಹಿಕಲ್ ಇನ್ಸೂರೆನ್ಸ್, ಬಸ್, ರೈಲು, ವಿಮಾನ ಟಿಕೆಟ್ ಸೇವೆಯೂ ಸಿಗಲಿದೆ.
ಆದಿತ್ಯವಾರ ಹೊರತುಪಡಿಸಿ ವಾರದ ಎಲ್ಲಾ ದಿನವೂ ಸೇವೆ ಲಭ್ಯ ಎಂದು ತಿಳಿಸಿ, ಸಹಕಾರ ಕೋರಿದರು. ಕೃಷ್ಣಪ್ರಸಾದ್ ಹೆಚ್. ಸ್ವಾಗತಿಸಿದರು. ರವಿಕೃಷ್ಣ ಸಹಕರಿಸಿದರು.