ಕೊಡಿಮರ ಹಾ.ಉ.ಮಹಿಳಾ ಸಹಕಾರ ಸಂಘ; ಅಧ್ಯಕ್ಷೆ: ದೇವಕಿ, ಉಪಾಧ್ಯಕ್ಷೆ: ಸ್ವಪ್ನ

0

ಪುತ್ತೂರು:ಬೆಳ್ಳಿಪ್ಪಾಡಿ ಗ್ರಾಮದ ಕೋಡಿಂಬಾಡಿಯಲ್ಲಿರುವ ಕೊಡಿಮರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷೆಯಾಗಿ ದೇವಕಿ, ಉಪಾಧ್ಯಕ್ಷರಾಗಿ ಸ್ವಪ್ನ, ನಿರ್ದೇಶಕರಾಗಿ ನಮಿತ, ಉಷಾ, ಸವಿತಾ ಶೆಟ್ಟಿ, ಭವ್ಯಾ, ಸುಜಾತ, ಧನ್ಯಶ್ರೀ, ಭವಾನಿ ಜೆ., ಇಂದಿರಾ, ಹರಿಣಾಕ್ಷಿ, ಮಮತಾ, ಗೀತಾ ಅಯ್ಕೆಯಾಗಿದ್ದಾರೆ.

ಮಾ. 31ರಂದು ನೂತನ ಸಂಘದ ಉದ್ಘಾಟನೆ: ಕೊಡಿಮರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು ಇದರ ಉದ್ಘಾಟನಾ ಸಮಾರಂಭ ಮಾ.31ರಂದು ಸಂಘದ ಅಧ್ಯಕ್ಷೆ ದೇವಕಿ ಇವರ ಅಧ್ಯಕ್ಷತೆಯಲ್ಲಿ ಕೊಡಿಮರ ಅಂಗನವಾಡಿ ಕೇಂದ್ರದ ವಠಾರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here