





ರಾಮಕುಂಜ: ನಾಟ್ಯಾರಾಧನಾ ನೃತ್ಯಾಲಯ, ಆಲಂಕಾರು ಇಲ್ಲಿಯ ನೃತ್ಯಗುರು ವಿದ್ವಾನ್ ರಾಘವೇಂದ್ರ ಪ್ರಸಾದ್‌ರವರ ಶಿಷ್ಯೆಯರಾದ ರಶ್ಮಿ ಕೆ., ದೀಪನಿಧಿ ಎಸ್., ಯಶಸ್ವಿನಿ, ರಾಶಿ ವೈ., ಅಹ್ನಾ, ಆದ್ಯಾ ಬಿ.ರೈ, ಧನ್ವಿ ಬಿ., ಪ್ರಜ್ಞ, ಉಪಮಾ ಅವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ 2022-23ನೇ ಸಾಲಿನ ಭರತನಾಟ್ಯ ಪರೀಕ್ಷೆಯ ಜೂನಿಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.













