ಪುತ್ತೂರು: ರಾಮನವಮಿ ವಿಶೇಷವಾಗಿ ದ್ವಾರಕ ಪ್ರತಿಷ್ಠಾನದ ವತಿಯಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಷರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರಿತಿಕಲಾ ಅವರಿಂದ ” ಸಂಪೂರ್ಣ ರಾಮಾಯಣ” ನೃತ್ಯ ರೂಪಕ ಕಾರ್ಯಕ್ರಮ ಮುಕ್ರಂಪಾಡಿ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಿತು.

ಸನಾತನ ಸಂಪ್ರದಾಯದಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಶ್ರೀರಾಮನು ಈ ನವಮಿಯಂದು ಅಯೋಧ್ಯೆಯಲ್ಲಿ ಜನಿಸಿದನು. ಈ ಕಾರಣಕ್ಕಾಗಿಯೇ ರಾಮನವಮಿಯಂದು ಉಪವಾಸ ಮತ್ತು ಪೂಜೆ ಮಾಡುತ್ತಾರೆ.

ಇದಕ್ಕೆ ಪೂರಕವೆಂಬಂತೆ ಮೂಡಬಿದ್ರೆ, ಐರ್ವಾನಾಡು, ಎಡನೀರು ಮಠ, ಗೋಕರ್ಣದಲ್ಲಿ ವಿಶೇಷವಾಗಿ ಪ್ರದರ್ಶನಗೊಂಡ ಸಂಪೂರ್ಣ ರಾಮಾಯಣವನ್ನು ನೃತ್ಯ ರೂಪಕದ ಮೂಲಕ ವಿದ್ವಾನ್ ದೀಪಕ್ ಕುಮಾರ್ ನೃತ್ಯ ದಂಪತಿಯಿಂದ ಅರಾಧನೆ ನಡೆಯಿತು. ಹಿರಿಯರಾದ ಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿದರು.

ಅದ್ವಿತ್ ಕಲ್ಲೂರಾಯ ರಾಮನವಮಿ‌ ಕುರಿತು ಮಾತನಾಡಿದರು. ದ್ವಾರಕ ಪ್ರತಿಷ್ಠಾನದ ಶ್ರೀ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಸದಾಶಿವ ಭಟ್ ಪೆರ್ಲ, ಡಾ.ಪ್ರತಿಭಾ ಕಲ್ಲೂರಾಯ ನೃತ್ಯ ಗುರುಗಳನ್ನು ಗೌರವಿಸಿದರು. ಅಪೂರ್ವ ಗೌರಿ ನೃತ್ಯ ಗುರುಗಳನ್ನು ಪರಿಚಯಿಸಿದರು. ಅವನೀಶ್ ಕೃಷ್ಣ ಸ್ವಾಗತಿಸಿದರು.

ಬಳಿಕ ನೃತ್ಯ ರೂಪಕದಲ್ಲಿ ಬೇರೆ ಬೇರೆ ಹಸ್ತಗಳ ಮೂಲಕ ರಾಮಾಯಣದ ಪಾತ್ರದಲ್ಲಿ ಬರುವವರನ್ನು ಹಸ್ತಮುದ್ರೆಯ ಮೂಲಕ ತೋರಿಸಿದರು. ದಶರತ ಪತ್ನಿಯರ ಜೊತೆ ಯಜ್ಞ, ಸೀತಾ ಕಲ್ಯಾಣ, ಪಟ್ಟಾಭಿಷೇಕದ ಕಥೆ, ವನವಾಸ, ಸೀತಾಅಪಹರಣ, ಅಶೋಕವನ, ರಾವಣ ಸಂವಾರ, ಸೀತೆಯ ಅಗ್ನಿಪರೀಕ್ಷೆ ನೃತ್ಯರೂಪಕದಲ್ಲಿ ತೋರಿಸಲಾಯಿತು‌.

LEAVE A REPLY

Please enter your comment!
Please enter your name here