ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು – ಪ್ರಥಮ ಪಿಯುಸಿ ಶೇ. 100 ಫಲಿತಾಂಶ

0

ಪುತ್ತೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸತತ 6ನೇ ಬಾರಿಗೆ ಶೇ.100ರ ಅತ್ಯುತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ಪರೀಕ್ಷೆ ಬರೆದ 72 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ , 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. ಬಿಳಿಯೂರಿನ ಯು ಈಶ್ವರ ಭಟ್ಟ್ ಹಾಗೂ ಗೀತಾ ಲಕ್ಷ್ಮೀ ದಂಪತಿಯ ಪುತ್ರಿ ಯು ಅಮೃತಾ ದೇವಿ 589 ಅಂಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಪೆರ್ನೆ ಉಮನಾಥ ಶೆಟ್ಟಿ ಎಸ್ ಹಾಗೂ ಹೇಮಲತ ಯು ಶೆಟ್ಟಿ ದಂಪತಿಯ ಪುತ್ರ ಸುಮಂತ್ ಶೆಟ್ಟಿ ಎಸ್ 587 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಹಾಗೂ ಉರುವಾಲು ಲಕ್ಷ್ಮೀನಾರಾಯಣ ರಾವ್ ಹಾಗೂ ಇಂದಿರ ದಂಪತಿಯ ಪುತ್ರಿ ಅಶ್ವಿನಿ ರಾವ್ 586 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಪ್ರಾಂಶುಪಾಲ ಎಚ್. ಕೆ. ಪ್ರಕಾಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here