ದುಡ್ಡಿಲ್ಲ ಅಂತಿದ್ರೆ ಮೆಡಿಕಲ್‌ ಕಾಲೇಜು ತರಕಾಗುತ್ತಾ?.. ಮೆಡಿಕಲ್‌ ಕಾಲೇಜಿಗೆ ಎಷ್ಟೆ ಖರ್ಚಾದರೂ ಮಾಡಿಯೇ ಮಾಡುತ್ತೇನೆ-

0

ಅಶೋಕ್‌ ರೈ ಅವರ ಕಾರ್ಯ ಸಮಾಜದ ಶ್ರೀಮಂತ ವರ್ಗದವರಿಗೆ ಮಾರ್ಗದರ್ಶನವಾಗಲಿ- ಪುತ್ತೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ, ಉದ್ಯಮಿ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಸಂಭ್ರಮದ ಸಲುವಾಗಿ ಅ.20ರಂದು ವಸ್ತ್ರ ವಿತರಣಾ ಸಮಾರಂಭ ‘ಅಶೋಕ ಜನಮನ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೀಪಾವಳಿ ಹಬ್ಬದ ಪ್ರಯುಕ್ತ ಅಶೋಕ್‌ ರೈ ಮತ್ತು ಅವರ ಕುಟುಂಬದವರು ವಸ್ತ್ರ ವಿತರಾಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದೇನೆ, ಅಶೋಕ್‌ ರೈ ಶಾಸಕರಾಗಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರ ದೀಪಾವಳಿ ಕಾರ್ಯಕ್ರಮ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಅದು ಇಂದು 1 ಲಕ್ಷ ಜನರಿಗೆ ತಲುಪಿದೆ. ಅವರ ಈ ಕಾರ್ಯ ಸಮಾಜದ ಶ್ರೀಮಂತ ವರ್ಗದವರಿಗೆ ಮಾರ್ಗದರ್ಶನವಾಗಲಿ. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮನುಷ್ಯ ಗಳಿಸಿದನ್ನ ನಿರ್ಗತಿಕರಿಗೆ ಹಂಚುವುದು ಬಹಳ ಒಳ್ಳೆಯ ಕೆಲಸ ಎಂದರು.

ಬಸವಣ್ಣ ಅವರು ನಮ್ಮೆಲ್ಲರಿಗೂ 2 ತತ್ವಗಳನ್ನು ನೀಡಿದ್ದಾರೆ ಅದು ಕಾಯಕ ಮತ್ತು ದಾಸೋಹ. ಕಾಯಕ ಮಾಡುವಲ್ಲಿ ಎಲ್ಲರು ಭಾಗವಹಿಸಬೇಕು, ನಾವು ಉತ್ಪಾದನೆ ಮಾಡಬೇಕು ಅದನ್ನು ಎಲ್ಲರಿಗೂ ಹಂಚುವ ಕೆಲಸ ಮಾಡಬೇಕು.ಇದನ್ನು ಬಸವಣ್ಣ 12ನೇ ಶತಮಾನದಲ್ಲಿ ಹೇಳಿದ್ದರು. ಇದನ್ನು ಅಶೋಕ್‌ ರೈ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ.ಅಶೋಕ್‌ ರೈ ಅವರ ಕಾರ್ಯಚಟುವಟಿಕೆಯನ್ನು ಬೇರೆಯವರು ನಿರ್ವಹಿಸಲಿ, ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಸಮಾನತೆಯನ್ನು ತರಬೇಕಾಗುತ್ತದೆ ಎಂದರು.

1949 ನ.25ರಂದು ಅಸೆಂಬ್ಲಿಯಲ್ಲಿ ಅಂಬೇಡ್ಕರ್‌ ಅವರು ಮಾತನಾಡಿ ಸಮ ಸಮಾಜ, ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ್ದರು. ನಾನು 2 ನೇ ಸಲ ಮುಖ್ಯಮಂತ್ರಿ ಆದ ಮೇಲೆ ಎಲ್ಲಾ ಶಾಲಾ ಕಾಲೇಜಿನಲ್ಲಿ ಸಂವಿಧಾನ ಪಿಠಿಕೆ ಓದಿಸುತ್ತಿದ್ದೇನೆ ಕಾರಣ ಸಂವಿಧಾನ ಎಲ್ಲರಿಗೂ ಅರ್ಥ ಆಗಬೇಕು, ಅರ್ಥವಾಗದಿದ್ದರೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬ ಕಾರ್ಣಕ್ಕಾಗಿ.ಯಾವ ಧರ್ಮವೂ ಕೂಡ ಧ್ವೇಷ ಮಾಡಿ ಎಂದು ಹೇಳುವುದಿಲ್ಲ. ಪ್ರತಿಯೊಬ್ಬರನ್ನು ಪ್ರೀತಿಸಿ ಎಂದು ಹೇಳುವುದು.ಕುವೆಂಪು ಅವರ ಮಾತಿನಂತೆ ಸರ್ವೇ ಜನಾಂಗದ ಶಾಂತಿಯ ತೋಟದಂತೆ ಬದುಕಬೇಕು, ಪರಸ್ಪರ ಕಚ್ಚಾಟ ಮಾಡಬಾರದು. ಸಹಿಷ್ಣುತೆ ಸಹಬಾಳ್ವೆ ಪ್ರತಿಯೊಂದು ಧರ್ಮದವರು ಪಾಲನೆ ಮಾಡಿದಾಗ ಸಂವಿಧಾನ ಎತ್ತಿ ಹಿಡಿದ ಹಾಗೆ ಆಗುತ್ತದೆ ಎಂದರು.

ನಾನು ಅನ್ನಭಾಗ್ಯ ಕಾರ್ಯವನ್ನು ಮಾಡಿದ್ದು ಯಾರೂ ಕೂಡ ಒಂದು ತುತ್ತಿಗೆ ಇನ್ನೊಬ್ಬರ ಮನೆಯಲ್ಲಿ ಕೇಳಬಾರದು ಆ ಕಾರಣಕ್ಕಾಗಿ ಮಾಡಿದೆ.ಯಾರೂ ಹಸಿವಿನಿಂದ ಮಲಗಬಾರದು. ನಮಗೆ ಅನ್ನದ ಮಹತ್ವ ಗೊತ್ತಾಗಬೇಕು. ದ.ಕ ಜನ ಬಹಳ ಬುದ್ದಿವಂತರು ನೀವೆಲ್ಲಾ ಅಡಿಕೆ ತೆಂಗು ಬೆಲೆಯುವಂತವರು,ನಾವೆಲ್ಲ ಅನ್ನ ಉಣ್ಣುತ್ತಿದ್ದದ್ದು ನೆಂಟರು ಬಂದಾಗ ಮಾತ್ರ, ಬಾಕಿ ಮುದ್ದೆ ತಿನ್ನುತ್ತಿದ್ದೇವು.

ಈ ಬಾರಿ 5 ಯೋಜನೆ ಜಾರಿ ತಂದಿದ್ದೇನೆ.ಸರಕಾರದಲ್ಲಿ ದುಡ್ಡಿಲ್ಲ ಎನ್ನುತ್ತಿದ್ದೀರಿ ಆದರೆ ದುಡ್ಡಿಲ್ಲ ಅಂತಿದ್ರೆ ಮೆಡಿಕಲ್‌ ಕಾಲೇಜು ತರಕಾಗುತ್ತಾ, ಅಶೋಕ್‌ ರೈ 2000ಸಾವಿರ ಕೋಟಿ ತರಕಾಗುತ್ತಾ. ಮೇಲ್ಜಾತಿ ಮಕ್ಕಳು ಶ್ರೀಮಂತ ಮಕ್ಕಳು ಜೈಲು ಪಾಲು, ಮರ್ಡರ್‌ ಆಗುವುದನ್ನು ನೀವು ನೋಡಿದ್ದೀರಾ. ಇದಕ್ಕೆ ಕಡಿವಾಣ ಹಾಕಲು ನಾನು ಧಕ್ಷವಾದ ಅಧಿಕಾರಿಗಳನ್ನು ನೇಮಕ ಮಾಡಿದೆ. ದಕ್ಷ ಪೊಲೀಸ್‌ ಅಧಿಕಾರಿಗಳಿದ್ರೆ ಹೇಗೆ ಬದಲಾವಣೆ ತರಲು ಸಾಧ್ಯ ಎನ್ನುವುದು ಗೊತ್ತಾಗುತ್ತದೆ.ಪ್ರತಿಯೊಬ್ಬ ವ್ಯಕ್ತಿಯೂ ಮನುಷ್ಯನಾಗಲು ಬದುಕಬೇಕು,ನಮ್ಮ ಸರಕಾರ ಏನು ಹೇಳ್ತೆವೆ ಅದನ್ನು ಮಾಡಿಯೇ ಮಾಡ್ತೆವೆ. ಮುಂದಿನ ಚುನಾವಣೆಯಲ್ಲಿ ಜನರು 8 ವಿಧಾನಸಭಾ ಕ್ಷೇತ್ರದಲ್ಲಿಯೂ ಆಶಿರ್ವಾದ ಮಾಡಬೇಕು. ಮೆಡಿಕಲ್‌ ಕಾಲೇಜಿಗೆ ಎಷ್ಟೆ ಖರ್ಚಾದರೂ ಮಾಡಿಯೇ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ನಿಲ್ಲಿಸುವುದಿಲ್ಲ.

ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು, ಅದರಲ್ಲು ದ.ಕನದ ಜನರು ವಿಶೇಷ ಒತ್ತು ನೀಡಬೇಕು. ನಾನು ಅಶೋಕ್‌ ರೈ ಒತ್ತಡ ಮೆರೆಗೆ ಬಂದಿದ್ದೇನೆ, ಅವರ ಒತ್ತಡಕ್ಕೆ ಮಣಿದು ಹಬ್ಬ ಬಿಟ್ಟು ಬಂದಿದ್ದೇನೆ. ಜೇನು ಕಚ್ಚಿ ನಿಧನರಾದ ಮಗುವಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ ನೀಡುತ್ತೇನೆ. ಅಶೋಕ್ ರೈ ಅವರ ಕೆಲಸ ಎಲ್ಲರಿಗೂ ಮಾದರಿ ಅಶೋಕ್‌ ರೈ , ಕುಟುಂಬ ವರ್ಗದವರಿಗೆ ಒಳಿತಾಗಲಿ ಎಂದರು.

LEAVE A REPLY

Please enter your comment!
Please enter your name here