ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ, ದರ್ಶನ ಬಲಿ

0

ಪುತ್ತೂರು: ಮಾಂಗಲ್ಯ ವರಪ್ರದಾಯನಾಗಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವಗಳು ನಡೆದು ಮಾ.31ರಂದು ದೇವರ ವರ್ಷಾವಧಿ ಜಾತ್ರೋತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ ನೆರವೇರಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಲಕ್ಷ್ಮೀಶ ತಂರ್ತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಪುಷ್ಪರಥ ಸಮರ್ಪಣಾ ಕಾರ್ಯಗಳು, ವೈದಿಕ, ತಾಂತ್ರಿಕ ವಿಧಿ ವಿಧಾನಗಳು ನೇರವೇರಿದೆ. ಮಾ.30ರಂದು ಮುಂಜಾಜೆ 108 ಕಾಯಿ ಮಹಾಗಣಪತಿ ಹೋಮ, ದೇವರಿಗೆ ಅಷ್ಟಬಂಧಕ್ರಿಯೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಿತು. ನಂತರ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರಿಂದ ದೇವರಿಗೆ ನೂತನ ಪುಷ್ಪರಥದ ಸಮರ್ಪಣೆ, ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನೆ, ಸ್ಯಾಕ್ಸೋಫೋನ್ ವಾದನ, ಮಹಾಪೂಜೆ ನಡೆದು ಶ್ರೀದೇವರ ಬಲಿ ಹೊರಟು, ಶ್ರೀ ಭೂತ ಬಲಿ ಉತ್ಸವ, ಪುಷ್ಪರಥೋತ್ಸವ ಹಾಗೂ ವಸಂತಕಟ್ಟೆಪೂಜೆ ನೆರವೇರಿತು.

ಮಾ.31ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು, ಉತ್ಸವ, ಪಲ್ಲಕ್ಕಿ ಉತ್ಸವ, ಪುಷ್ಪರಥೋತ್ಸವ, ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಗೌರವ ಸಲಹೆಗಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಉಪ್ಪಳ, ಉಪಾಧ್ಯಕ್ಷ ಕೆ.ಎಂ ಬೆಳಿಯಪ್ಪ ಗೌಡ ಕೆದ್ಕಾರ್, ಯಂ ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ್ ರೈ ಶಿಬರ, ಸದಸ್ಯರಾದ ಸುಜಯ್ ತಂತ್ರಿ ಉಪ್ಪಳ, ಪ್ರಸನ್ನ ಭಟ್ ಪಂಚವಟಿ, ಕೆ.ಗಿರೀಶ್ ರೈ ಮಣಿಯ, ಯಂ.ರವಿ ಮಣಿಯ, ಯಂ ಸುಧೀರ್ ಹೆಬ್ಬಾರ್ ಮಣಿಯ, ಪದ್ಮನಾಭ ಪೂಜಾರಿ ಬೆದ್ರಾಳ, ಮೋನಪ್ಪ ಪುರುಷ ಮುಗೇರಡ್ಕ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ, ಅರ್ಚಕ ಪ್ರಸಾದ್ ಅಡಿಗ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ ಕೆಮ್ಮಿಂಜೆ, ಉಪಾಧ್ಯಕ್ಷರಾದ ಚಂದ್ರಕಲಾ ಮುಕ್ವೆ, ರವೀಂದ್ರ ರೈ ನೆಕ್ಕಿಲು, ರಾಧಾಕೃಷ್ಣ, ನವೀನ್ ನಾಯಕ್ ಚಂದ್ರಮ್‌ಸಾಗ್, ವಸಂತ ರೈ ಶಿಬರ, ಜತೆಕಾರ್ಯದರ್ಶಿ ದಿನೇಶ್ ಹೆಬ್ಬಾರ್ ದೋಳ್ತಟ್ಟ, ವಿಶ್ವನಾಥ ರೈ ಅಳಕೆ, ಸದಸ್ಯರಾದ ಸುರೇಶ್ ಪ್ರಭು ಶೆಟ್ಟಿಮಜಲು, ಜಯರಾಮ ಪೂಜಾರಿ ಒತ್ತೆಮುಂಡೂರು, ಮಂಜುನಾಥ ಶೇಖ ಶಿಬರ, ವಸಂತ ಗೌಡ ಸೇರಾಜೆ, ನಾರ್ಣಪ್ಪ ಸಾಲಿಯಾನ್ ಮರಕ್ಕೂರು, ಸುಂದರ ರೈ ಕಾಯರ್‌ಮುಗೇರು, ಶರತ್‌ಚಂದ್ರ ಬೈಪಾಡಿತ್ತಾಯ ಬಜಪ್ಪಳ, ರಾಜೇಂದ್ರ ಭಟ್ ಮಣಿಯ, ಉಮೇಶ್ ಇಂದಿರಾನಗರ ವಿವಿಧ ಉಪ ಸಮಿತಿಗಳು ಸಂಚಾಲಕರು, ಸದಸ್ಯರು, ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಊರ, ಪರವೂರ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here