ಪುತ್ತೂರು: ಜಿಲ್ಲಾ ಕೇಂದ್ರದ ಕನಸಿಗೆ ಪೂರಕವೆಂಬಂತೆ ಪ್ರತಿಷ್ಠಿತ ಜಿಎಲ್ ಸಮೂಹ ಸಂಸ್ಥೆಗಳಿಂದ ಪುತ್ತೂರುಗೆ ಬಹುದೊಡ್ಡ ಗಿಫ್ಟ್ ಸಿದ್ಧವಾಗಿದೆ.
ಏಪ್ರಿಲ್ 2, ಪುತ್ತೂರು ಜಿಎಲ್ ವನ್ ಮಾಲ್ ಲೋಕಾರ್ಪಣಾ ಸಮಾರಂಭ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂಭ್ರಮದಲ್ಲಿರುವ ಹತ್ತೂರಿನ ಜನರಿಗೆ, ಜಿಎಲ್ ಸಮೂಹ ಸಂಸ್ಥೆಗಳು ಇನ್ನೊಂದು ಸಂಭ್ರಮ ಉಣಬಡಿಸುತ್ತಿದೆ. ಸುಸಜ್ಜಿತ, ಆಧುನಿಕ ಮಾರುಕಟ್ಟೆ ವ್ಯವಸ್ಥೆಗೆ ಪೂರಕವೆಂಬಂತೆ ತಲೆಎತ್ತಿರುವ ಮಾಲ್, ಪುತ್ತೂರಿನ ಮಟ್ಟಿಗೆ ಹೊಸ ಪರಿಚಯವೇ ಸರಿ. ಈ ಮೂಲಕ ಪುತ್ತೂರಿಗೆ ಮಾಲ್ ಕಲ್ಚರ್ ಪಾದಾರ್ಪಣೆ ಮಾಡಿದೆ.
ಜಿಲ್ಲಾ ಕೇಂದ್ರಕ್ಕೆ ಪೂರಕ: ಮಂಗಳೂರು ಬಳಿಕ ದಕ್ಷಿಣ ಕನ್ನಡದ ಎರಡನೇ ಬಹುದೊಡ್ಡ ವಾಣಿಜ್ಯ ಕೇಂದ್ರ ಪುತ್ತೂರು. ಕಳೆದ ಹಲವು ವರ್ಷಗಳಿಂದ ಪುತ್ತೂರು ಜಿಲ್ಲಾ ಕೇಂದ್ರವಾಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಜಿಲ್ಲಾ ಕೇಂದ್ರವಾಗಬೇಕಿದ್ದರೆ ಕೆಲ ಮೂಲಸೌಕರ್ಯಗಳು ಪುತ್ತೂರಿಗೆ ಬರಬೇಕಾದದ್ದು ತೀರಾ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಜಿಎಲ್ ವನ್ ಮಾಲ್ ಮಹತ್ವ ಪಡೆದುಕೊಳ್ಳುತ್ತದೆ.
ಜಿಎಲ್ ಸಮೂಹ ಸಂಸ್ಥೆಗಳ ಚೇರ್ ಮೆನ್ ಆಗಿರುವ ಜಿ.ಎಲ್. ಬಲರಾಮ ಆಚಾರ್ಯ ಅವರ ನೇತೃತ್ವದಲ್ಲಿ ಸರ್ವಸುಸಜ್ಜಿತ ಮಾಲ್ ಅನ್ನು ಪುತ್ತೂರಿಗೆ ಪರಿಚಯ ಮಾಡಲಾಗುತ್ತಿದೆ. ಇದರೊಂದಿಗೆ ಮ್ಯಾಕ್ಸ್, ಈಜ್ಹಿ ಬಯ್ ಎನ್ನುವ ಮಲ್ಟಿ ಬ್ರಾಂಡೆಡ್ ಕಂಪೆನಿಗಳನ್ನು ಪುತ್ತೂರಿಗೆ ಕರೆತಂದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಬೆಳೆಯುತ್ತಿರುವ ಪುತ್ತೂರಿಗೆ ತಕ್ಕಂತೆ ವಾಣಿಜ್ಯಿಕ ವ್ಯವಹಾರಗಳಲ್ಲಿಯೂ ಪ್ರಗತಿ ಕಾಣಬೇಕು. ಇಲ್ಲದೇ ಹೋದರೆ, ಆ ಪೇಟೆ ನಿಂತ ನೀರಾಗುತ್ತದೆ. ಪುಟ್ಟ ಪಟ್ಟಣ ಪುತ್ತೂರನ್ನು ಅಭಿವೃದ್ಧಿ ಹಾದಿಯಲ್ಲಿ ನಡೆಸಬೇಕು ಎಂದರೆ ಮಾಲ್ ಕಲ್ಚರ್ ಅಗತ್ಯವಿತ್ತು. ಇಂತಹ ಅಗತ್ಯವನ್ನು ಜಿಎಲ್ ಬಲರಾಮ ಆಚಾರ್ಯ ಮತ್ತವರ ತಂಡ ಪೂರೈಸುತ್ತಿದೆ.
ಜಿಎಲ್ ವನ್ ಮಾಲ್ ವೈಶಿಷ್ಟ್ಯತೆ: ಜಿಎಲ್ ವನ್ ಮಾಲ್ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಪರಿಪೂರ್ಣ ಮಾಲ್ ಎನ್ನುವ ಪರಿಕಲ್ಪನೆಯನ್ನು ಪುತ್ತೂರಿಗೆ ಪರಿಚಯಿಸುವ ಜೊತೆಗೆ, ಹಲವು ಪ್ರಥಮಗಳಿಗೆ ಕಾರಣವಾಗಿದೆ.
ಮಾಲ್ ಎನ್ನುವುದೇ ವ್ಯಾಪಾರದ ಆಧುನೀಕರಣ. ಇಂತಹ ಆಧುನೀಕರಣದ ವ್ಯಾಪಾರವೇ ಪುತ್ತೂರಿಗೆ ಮೊದಲು. ಭಾರತ್ ಸಿನಿಮಾಸ್ ಅನ್ನು ಪುತ್ತೂರಿಗೆ ಪರಿಚಯಿಸಿದ್ದು ಜಿಎಲ್. ಟ್ರಾಫಿಕ್ ದಟ್ಟಣೆಯ ನಡುವೆ, ಸರ್ವಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿಯೇ ಮೊದಲು. ಎಲಿವೇಟರ್ ವ್ಯವಸ್ಥೆಯೂ ಇಲ್ಲಿದ್ದು, ಇದು ಕೂಡ ಪುತ್ತೂರಿನಲ್ಲಿ ಇದೇ ಮೊದಲು. ಮಾಲ್ ಎಂದರೆ ಕೇಂದ್ರಿಯ ಹವಾನಿಯಂತ್ರಿತ ವ್ಯವಸ್ಥೆ ಇರಲೇಬೇಕು. ಮಾಲ್ ಮೂಲಕ ಕೇಂದ್ರಿಯ ಬೃಹತ್ ಮಾಲ್ ಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಆಧುನಿಕ ಶೌಚಾಲಯಗಳನ್ನು ಇಲ್ಲಿ ಕಾಣಬಹುದು.
ಗ್ರೀನ್ ಎನರ್ಜಿ, ಕ್ಲೀನ್ ಎನರ್ಜಿ ಎನ್ನುವುದು ಸರಕಾರದ ಯೋಜನೆ. ಈ ಯೋಜನೆಗೆ ಪೂರಕವಾಗಿ ಪರಿಷ್ಕರಿಸಿದ ನೀರನ್ನು ಕೈತೋಟಗಳಿಗೆ, ಶೌಚಾಲಯಗಳಿಗೆ ಬಳಸುವ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.
ಹೀಗಿದೆ ಜಿಎಲ್ ವನ್ ಮಾಲ್: ಮ್ಯಾಕ್ಸ್, ಈಸಿ ಬಯ್ ನಂತಹ ಮಲ್ಟಿ ಬ್ರಾಂಡೆಡ್ ಕಂಪೆನಿಗಳನ್ನು ಪರಿಚಯಿಸಿದ ಜಿಎಲ್ ವನ್ ಮಾಲ್ ನ ಒಟ್ಟು ವಿಸ್ತೀರ್ಣ 1 ಲಕ್ಷ ಚದರ ಅಡಿ. ಒಟ್ಟು 2 ಅಂತಸ್ತಿನ ಕಟ್ಟಡ ಇದೀಗ ಸಿದ್ಧವಾಗಿದೆ. ಮುಂದೆ 3ನೇ ಅಂತಸ್ತು ಕೂಡ ವ್ಯವಹಾರಕ್ಕೆ ತೆರೆದುಕೊಳ್ಳಲಿದೆ. ಇದರಲ್ಲಿ ಬೇಸ್ ಮೆಂಟ್‌ನಲ್ಲಿ ಪಾರ್ಕಿಂಗ್. ಕೆಳ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಶಾಪಿಂಗ್ ಮ್ಯಾಕ್ಸ್, ಈಸೀ ಬಯ್, ಮೆಟ್ರೋ, ವಾಕ್ ವೇ, ಮಲ್ಟಿ ಬ್ರಾಂಡ್ ವಾಚ್ ಶೋ ರೂಂ, ಬ್ಯಾಗ್ ಶೋ ರೂಂ ಇತ್ಯಾದಿ ಮಳಿಗೆಗಳು ಇರಲಿದೆ.
2ನೇ ಅಂತಸ್ತಿನಲ್ಲಿ ಭಾರತ್ ಸಿನೇಮಾಸ್ ಥಿಯೇಟರ್, ಮಕ್ಕಳ ಗೇಮಿಂಗ್ ಸೆಂಟರ್, ಫುಡ್ ಕೋರ್ಟ್ ಇತ್ಯಾದಿ ಇರಲಿದೆ. ಮುಂದೆ 3ನೇ ಅಂತಸ್ತು ಕೂಡ ವ್ಯವಹಾರಕ್ಕೆ ತೆರೆದುಕೊಳ್ಳಲಿದ್ದು, ಇಲ್ಲಿಗೆ ಕೆಲ ಕಚೇರಿಗಳು ಬರಲಿವೆ.
ಸುಸಜ್ಜಿತ ಪಾರ್ಕಿಂಗ್: ಪುತ್ತೂರು ಪೇಟೆಯಲ್ಲಿ ಪಾರ್ಕಿಂಗ್ ಬಹುದೊಡ್ಡ ತಲೆನೋವು. ಆದರೆ ಜಿಎಲ್ ವನ್ ಮಾಲ್ ಒಳಗಡೆ ಪ್ರವೇಶಿಸಿದರೆ, ಪಾರ್ಕಿಂಗ್ ಸಮಸ್ಯೆಯೇ ಎದುರಾಗದು. ಇದಕ್ಕೆ ಕಾರಣ ಇಲ್ಲಿನ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ. ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಹಕರ ದೃಷ್ಟಿಕೋನದಿಂದ ಇದು ಬಹು ಅನುಕೂಲವೂ ಹೌದು.
ಭಾರತ್ ಸಿನಿಮಾಸ್ ಥಿಯೇಟರ್: ಮಾಲ್ ನಲ್ಲಿ ಸಿನಿಮಾ ವೀಕ್ಷಿಸಬೇಕೆಂದರೆ ಇದುವರೆಗೆ ಮಂಗಳೂರಿಗೆ ಹೋಗಬೇಕಿತ್ತು. ಇನ್ನು ಮುಂದೆ ಹಾಗಿಲ್ಲ. ನಿಮ್ಮ ಬಿಡುವಿನ ಸಮಯದಲ್ಲಿ ಪುತ್ತೂರಿನಲ್ಲೇ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ವೀಕ್ಷಿಸಬಹುದು. ಅತ್ಯಾಧುನಿಕ ಪರದೆಯಲ್ಲಿ ಸುಸಜ್ಜಿತ 3 ಪರದೆಗಳುಳ್ಳ ಸಿನಿಮಾ ಚಿತ್ರಮಂದಿರ ಜಿಎಲ್ ವನ್ ಮಾಲ್ ನಲ್ಲಿದೆ. 473 ಆರಾಮದಾಯಕ ಆಸನಗಳು, 2ಏ ಡಿಜಿಟಲ್ ಪ್ರೊಜೆಕ್ಷನ್, ಡಾಲ್ಟಿ ಡಿಜಿಟಲ್ ಸೌಂಡ್, 3ಆ ಪ್ಲೇಬ್ಯಾಕ್ ನೊಂದಿಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ, ಅತ್ಯಾಧುನಿಕ ಸೌಲಭ್ಯ ಮತ್ತು ಸುಂದರ ವಾಸ್ತು ವಿನ್ಯಾಸಗಳಿಂದ ನೂತನ ಮಲ್ಟಿಪ್ಲೆಕ್ಸ್ ಕಂಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಪಕ್ಕದಲ್ಲೇ ಫುಡ್ ಕೋರ್ಟ್ ಕೂಡ ಇರಲಿದೆ.