ಪುತ್ತೂರು: ಮುಕ್ವೆ ಸಮೀಪದ ಬಲ್ನಾಡು ಸುಬ್ಬಣ್ಣ ಭಟ್ಟರ ಪಂಚವಟಿ ಮನೆಯಲ್ಲಿ ಶ್ರೀರಾಮನವಮೀ ಸುವರ್ಣ ಮಹೋತ್ಸವ ಜರುಗಿತು. ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ಭಜನೆ, ಅಪರಾಹ್ನ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದಿಂದ ಯಕ್ಷಗಾನ ಪ್ರದರ್ಶನ, ಸಂಜೆ 4ರಿಂದ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಎಂ. ಪದ್ಮನಾಭ ಪೈಯವರು ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನೆ: ಹಿರಿಯ ಸಾಧಕ ವಿ.ಬಿ ಅರ್ತಿಕಜೆ, ಡಾ| ಎಂ. ಸದಾಶಿವ ಭಟ್ ಹಾಗೂ ಶಿಬರ ಜಯರಾಮ ಕೆದಿಲಾಯರವರಿಗೆ ಗೌರವಾಭಿವಂದನೆ ಸಲ್ಲಿಸಲಾಯಿತು. ಮೃದಂಗ ವಾದನದಲ್ಲಿ ಸಾಧನೆಗೈದ ಸುನಾದ ಕೃಷ್ಣ ಅಮೈರವರನ್ನು ಅಭಿನಂದಿಸಲಾಯಿತು.
ಬಲ್ನಾಡು ಸುಬ್ಬಣ್ಣ ಭಟ್ಟರ ಕೃತಿ ರಾಮಾಯಣ ಸ್ತೋತ್ರ ಗಾಯನದ ವೀಡಿಯೋ ಲೋಕಾರ್ಪಣೆಗೊಳಿಸಲಾಯಿತು. ಪ್ರಸನ್ನ ಯನ್ ಭಟ್ ಸ್ವಾಗತಿಸಿದರು. ಅತ್ರೇಯ ಮತ್ತು ಮನು ವೈದಿಕ ಪ್ರಾರ್ಥಿಸಿದರು. ಚೈತ್ರಿಕಾ ಮತ್ತು ಸಾಯಿಲಕ್ಷ್ಮ್ಮೀ ಆಶಯ ಗೀತೆ ಹಾಡಿದರು. ಸಾಯಿಸುಬ್ರಹ್ಮಣ್ಯ ವಂದಿಸಿದರು. ಡಾ.ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಸಂಜೆ ೬.೪೫ರಿಂದ ಉಡುಪಿಯ ಯುವ ಕಲಾವಿದೆ ಅರ್ಚನಾ ಮತ್ತು ಸಮನ್ವಿ ಮತ್ತು ಬಳಗದಿಂದ ರಾಮ ಭಕ್ತಿ ರಸಧಾರೆ – ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.