ಕಡಬ: ಮಾ.27ರಿಂದ 30ರವರೆಗೆ ಬೆಂಗಳೂರಿನ ಕಂಠಿರವ ಕ್ರೀಡಾಂಗಣದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ನ ಹಿರಿಯರ ವಿಭಾಗದಲ್ಲಿ ಕೊಣಾಜೆಯ ಆಶಾಲತಾ, ರೇಖಾ ಯುವರಾಜ ಆಲಾಡಿ, ಐತ್ತೂರಿನ ಭಾಸ್ಕರ ಗೌಡ, ಶಶಿಕಲಾ ಕುಶಾಲಪ್ಪ ಗೌಡ ಅವರುಗಳು ಸ್ಪರ್ಧಿಸಿ ಜಯಗಳಿಸಿದ್ದು, ಅಂತರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಣಾಜೆ ಗ್ರಾಮದ ಬೇಂಗತ್ತಡ್ಕ ನಿವಾಸಿ ಆಶಾಲತಾ ದಯಾನಂದ ಅವರು 800 ಮೀ ಓಟದಲ್ಲಿ ಪ್ರಥಮ, 5000 ಮೀಟರ್ ನಡಿಗೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕೊಣಾಜೆ ಗ್ರಾಮ ಆಲಾಡಿಯ ರೇಖಾ ಯುವರಾಜ ಅವರು 800 ಮೀಟರ್ ರನ್ನಿಂಗ್ ನಲ್ಲಿ ಪ್ರಥಮ, 800 ಮೀಟರ್ ರನ್ನಿಂಗ್ನಲ್ಲಿ ಪ್ರಥಮ, 5000 ಮೀಟರ್ ರನ್ನಿಂಗ್ ದ್ವಿತೀಯ, 5000 ಮೀಟರ್ ವೇಗದ ನಡಿಗೆಯಲ್ಲಿ ದ್ವಿತೀಯ, 4*400 ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಐತ್ತೂರು ಗ್ರಾಮದ ಮಾಳ ನಿವಾಸಿ ಭಾಸ್ಕರ ಗೌಡ ಅವರು 4*100ರಿಲೇಯಲ್ಲಿ ತೃತೀಯ ಹಾಗೂ 4*400 ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಹೊಸೊಕ್ಲು ಕುಶಾಲಪ್ಪ ಗೌಡರ ಪತ್ನಿ ಶಶಿಕಲಾ ಅವರು ಡಿಸ್ಕಸ್ ಥ್ರೋನಲ್ಲಿ ಪ್ರಥಮ, ಶಾರ್ಟ್ಪುಟ್ನಲ್ಲಿ ತೃತೀಯ ಸ್ಥಾನ ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.