ಕಾಣಿಯೂರು: ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯೋರ್ವರ ಮೃತದೇಹ ರೈಲ್ವೆ ಟ್ರ್ಯಾಕ್ ನಲ್ಲಿ ಪತ್ತೆ

0

ಕಾಣಿಯೂರು: ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯೋರ್ವರ ಮೃತದೇಹ ಕಾಣಿಯೂರು ರೈಲ್ವೆ ಟ್ರ್ಯಾಕ್ ನಲ್ಲಿ ಎ.6ರಂದು ಮಧ್ಯರಾತ್ರಿ ಪತ್ತೆಯಾಗಿದೆ.

ಮೃತ ದೇಹವನ್ನು ಬೆಳಂದೂರು ಗ್ರಾಮದ ಅಬೀರ ಕುಸುಮಾಧರ ಎಂಬವರದ್ದು ಎಂದು ಗುರುತಿಸಲಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸುಮಾರು 9ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯಾಗಿದ್ದ ಇವರು ಡ್ರೈವರ್ ಕಮ್ ಕಂಡಕ್ಟರ್ ಆಗಿದ್ದರು.

ಕೆಲ ತಿಂಗಳುಗಳ ಹಿಂದೆ ಇವರಿಗೆ ಮದುವೆಯಾಗಿದ್ದು, ಮೃತರು ತಾಯಿ, ಪತ್ನಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here