ಕೈಕಾರ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

0

ಮಕ್ಕಳ ಸೃಜನಶೀಲತೆಗೆ ಶಿಬಿರಗಳು ಅಗತ್ಯ-ನಾ. ಕುಕ್ಕುವಳ್ಳಿ

ಪುತ್ತೂರು: ಮಕ್ಕಳು ಸುಪ್ತ ಪ್ರತಿಭೆಗಳ ಸಂಗಮ. ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಲು ಶಿಬಿರಗಳು ಅಗತ್ಯ. ವರ್ಷವಿಡೀ ಶಿಕ್ಷಕರು ವಿವಿಧ ವಿಷಯಗಳ ಪಾಠಬೋಧನೆ ಮಾಡಿದರೂ ಶಿಬಿರಗಳಲ್ಲಿ ಅನೇಕ ಸಂಪನ್ಮೂಲರು ನೀಡುವ ಹೊಸಹೊಸ ಮಾಹಿತಿಗಳು ಸೃಜನಶೀಲ ಕಲೆ-ಸಾಹಿತ್ಯಗಳು ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುತ್ತವೆ. ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಕಲಿಕಾಹಬ್ಬಗಳು ಮಕ್ಕಳ ಸೃಜನಶೀಲತೆಗೆ ಉತ್ತಮ ವೇದಿಕೆಗಳಾಗಿವೆ. ಇಂದು ಮೂಲಭೂತ ಸೌಕರ್ಯ ಹಾಗೂ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳೊಂದಿಗೆ ಶಾಲಾ ವಾತಾವರಣ ಮಕ್ಕಳ ಆಕರ್ಷಣೀಯ ಕೇಂದ್ರಗಳಾಗಿವೆ. ಹೆತ್ತವರು ಗಮನಹರಿಸಬೇಕಾದ ಅಗತ್ಯವಿದೆ ಎಂದು ಮಧುಪ್ರಪಂಚ ಪ್ರಧಾನ ಸಂಪಾದಕ ಹಾಗೂ ಸುದ್ದಿ ಬಿಡುಗಡೆಯ ಪ್ರತಿಭಾರಂಗದ ಅಂಕಣಕಾರ, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.

ಅವರು ಶತಮಾನದ ಹೊಸ್ತಿಲಲ್ಲಿರುವ ಗ್ರಾಮೀಣ ಪ್ರದೇಶದ ಕೈಕಾರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಬೇಸಿಗೆ ಶಿಬಿರವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು.

ಮಣಿಕ್ಕರ ಶಾಲಾ ನಿವೃತ್ತ ಶಿಕ್ಷಕಿ ಶಾರದಾ ಮಾತನಾಡಿ ನಮ್ಮ ನಾಡು-ನುಡಿ ಸಂಸ್ಕೃತಿ-ಸಂಸ್ಕಾರಗಳ ಕುರಿತು ಭವಿಷ್ಯತ್ತಿನ ನಾಗರಿಕರಾಗುವ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಶಿಬಿರಗಳಿಂದಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ ಮಕ್ಕಳ ಜ್ಞಾನದಾಹ ಇಂಗಿಸುವ, ಅಂತ:ಶ್ಯಕ್ತಿ ವಿಕಾಸಗೊಳಿಸುವ, ಆಸಕ್ತಿ ಮೂಡಿಸುವ ಕಾರ್ಯಗಳಿಗೆ ಶಿಬಿರಗಳು ಪೂರಕವಾಗಲಿ ಎಂದು ಶುಭ ಹಾರೈಸಿದರು. ಸುಬ್ರಹ್ಮಣ್ಯ ಭಟ್, ರೇಖಾ ಯತೀಶ್ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು, ಯೋಗ ಸಂಪನ್ಮೂಲ ರಾಮಣ್ಣ ರೈ ಎಸ್. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗೌರವ ಶಿಕ್ಷಕಿ ಜಯಶ್ರೀ, ಶ್ರೀಕ್ಷೇತ್ರ ಧರ್ಮಸ್ಥಳದ ಜ್ಞಾನದೀಪ ಶಿಕ್ಷಕಿ ಭವ್ಯಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ನಿವೃತ್ತ ಮುಖ್ಯಗುರು, ಸಂಪನ್ಮೂಲ ಶಿಕ್ಷಕ ಜಯರಾಮ ಭಟ್ “ಆಟದ ಮೂಲಕ ಪಾಠ” ವಿಷಯದ ಕುರಿತು ಶಿಬಿರಾರ್ಥಿಗಳ ಮನರಂಜಿಸಿದರು. ವಿದ್ಯಾರ್ಥಿಗಳು, ಹೆತ್ತವರು, ಪೋಷಕರು ಪಾಲ್ಗೊಂಡರು.

LEAVE A REPLY

Please enter your comment!
Please enter your name here