





ಪುತ್ತೂರು: ಎರಡು ದಿನದ ಹಿಂದೆ ಪರ್ಲಡ್ಕ ಜಂಕ್ಷನ್ನಲ್ಲಿ ನಡೆದ ಸ್ಕೂಟರ್ಗಳ ಮಧ್ಯೆ ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಸಹ ಸವಾರೆಯೊಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಆ.೩ರಂದು ಮೃತಪಟ್ಟಿದ್ದಾರೆ.


ಗೋಳಿಕಟ್ಟೆ ನಿವಾಸಿಯಾಗಿದ್ದು ಮಸೀದಿ ರಸ್ತೆಯ ಬಳಿ ಬೀಡ ಅಂಗಡಿಯನ್ನು ಹೊಂದಿರುವ ಸೈಯದ್ ಅಸ್ಲಮ್ ಯಾನೆ ಆಲಂ ರವರ ಪತ್ನಿ ಅಫ್ಸಾ(54ವ)ರವರು ಮೃತಪಟ್ಟವರು. ಆ.1ರಂದು ಸೈಯದ್ ಆಲಂ ಅವರು ಪತ್ನಿ ಅಫ್ಸಾ ಅವರನ್ನು ಸ್ಕೂಟರ್ನಲ್ಲಿ ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಪರ್ಲಡ್ಕ ಜಂಕ್ಷನ್-ಕಲ್ಲಿಮಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪರ್ಲಡ್ಕ ಜಂಕ್ಷನ್ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಸವಾರಿ ಕೊಂಡು ಬರುತ್ತಿದ್ದ ವೇಳೆ ಪರ್ಲಡ್ಕ ಜಂಕ್ಷನ್ನಲ್ಲಿ ವಿರುದ್ಧ ಧಿಕ್ಕಿನಿಂದ ಮಹಮ್ಮದ್ ಮುಝಮ್ಮಿಲ್ ರವರು ಚಲಾಯಿಸುತ್ತಿದ್ದ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ.





ಡಿಕ್ಕಿಯಿಂದಾಗಿ ಸಹಸವಾರ ಮಹಮ್ಮದ್ ನವೀದ್, ಮತ್ತು ಇನ್ನೊಂದು ಸ್ಕೂಟರ್ನಲ್ಲಿ ಸವಾರ ಸೈಯದ್ ಅಸ್ಲಮ್ ಮತ್ತು ಸಹಸವಾರೆ ಅವರ ಪತ್ನಿ ಅಪ್ಸಾ ಅವರು ಗಾಯಗೊಂಡಿದ್ದರು. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ತೀವ್ರ ಗಾಯಗೊಂಡ ಅಪ್ಸಾ ಅವರನ್ನು ಮಂಗಳೂರು ಜನಂಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಅಪ್ಸಾ ಅವರು ಮೃತಪಟ್ಟಿದ್ದಾರೆ. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


            





