ಪುತ್ತೂರು: ಕಳೆದ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ನಡೆಸಿದ್ದ ಗಣಕಯಂತ್ರ ಪರೀಕ್ಷೆಯಲ್ಲಿ ದರ್ಬೆಯ ಲಕ್ಷ್ಮೀ ಟೈಪ್‌ರೈಟಿಂಗ್ ಮತ್ತು ಕಂಪ್ಯೂಟರ್‍ಸ್ ಸಂಸ್ಥೆಗೆ ಶೇ.100 ಫಲಿತಾಂಶ ಲಭಿಸಿದೆ.
ಸಂಸ್ಥೆಯಿಂದ ಆಫೀಸ್ ಅಟೋಮೇಶನ್ ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳಲ್ಲಿ ಸ್ಮಿತಾ ಎಸ್., ಸ್ವಾತಿ ಎಂ., ಸಿಂಧೂರ ಪಿ., ಶ್ರಾವ್ಯ ಕೆ., ಎಂ.ಸುಧಿಂದ್ರ, ಚೈತ್ರ ಯು., ಅಂಕಿತಾ ಪಿ., ಪ್ರಸನ್ನ ಕುಮಾರಿ ಎಂ., ಮಿಥುನ್ ಕೆ.ಎಸ್., ಅಂಕಿತ್ ಕೆ.ಆರ್., ಈಕ್ಷಾ, ಹಿತಾಶ್ರೀ ಎಸ್.ಜೆ., ಟೀನಾ ಅಲ್ವೀರಾ ಡಿಸೋಜರವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಗ್ರಾಫಿಕ್ ಡಿಸೈನ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.