ಪುತ್ತೂರು ಜಾತ್ರೆ – ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಎ.10ರಂದು ಧ್ವಜಾರೋಹಣ ಮೂಲಕ ಚಾಲನೆ ದೊರೆತಂತೆ ದೇವಳದ ಎದುರು ಗದ್ದೆಯಲ್ಲಿನ ಶ್ರೀ ಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಎ.17ರ ಬ್ರಹ್ಮರಥೋತ್ಸವದ ಸಂದರ್ಭ ಬಿಟ್ಟು ಉಳಿದ ದಿನ ಎ.10 ರಿಂದ 20ರ ತನಕ ಪ್ರತಿ ದಿನ ಸಂಜೆಯಿಂದ ರಾತ್ರಿ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ ಅವರು ಚಾಲನೆ ನೀಡಿದರು. ಆರಂಭದಲ್ಲಿ ಓಂ ಕಾರ ಮತ್ತು ಶಂಖನಾದ ಮೊಳಗಿಸಲಾಯಿತು.

ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ಡಾ. ಶಶಿಧರ್ ಕಜೆ, ಡಾ| ರಾಜೇಶ್ ಬೆಜ್ಜಂಗಳ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್, ಶಿಕ್ಷಕ ಸುಬ್ಬಪ್ಪ ಕೈಕಂಬ, ಪ್ರೊ. ವಿ.ಜಿ.ಭಟ್ ಉಪಸ್ಥಿತರಿದ್ದರು. ಕೃಷ್ಣವೇಣಿ, ವಿದುಷಿ ಪ್ರೀತಿಕಲಾ, ರೂಪಲೇಖ, ವಿಜಯಸರಸ್ವತಿ, ಮಾಲಿನಿ ಭಟ್, ಪ್ರೇಮಲತಾ ರಾವ್, ಉಮಾ ಡಿ ಪ್ರಸನ್ನ, ಲಕ್ಷ್ಮೀ ವಿ ಜಿ ಭಟ್, ಸುಧಾ, ಹರಿಣಿ ಪುತ್ತೂರಾಯ ಶಂಖನಾದ ಮೊಳಗಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇಂದು ಸಾಂಸ್ಕೃತಿಕ ಕಾರ್ಯಕ್ರಮದಲಿ
ಎ.11ರಂದು ಸಂಜೆ ಕೋಡಿಂಬಾಡಿಯ ಕು.ಸಮನ್ವಿತ್ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ, ಸಂತ ಫಿಲೋಮಿನಾ ಕಾಲೇಜಿನಿಂದ ನೃತ್ಯ ವೈವಿಧ್ಯ, ನೃತ್ಯೋಪಸನಾ ಕಲಾ ಕೇಂದ್ರದಿಂದ ಭರತನಾಟ್ಯ, ನಾಟ್ಯರಂಜನಿ ಕಲಾಲಯ ಮೊಟ್ಟೆತ್ತಡ್ಕ ಇವರಿಂದ ಭರತನಾಟ್ಯ, ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಿಂದ ಗಾಯನ – ಮರಳು ಚಿತ್ರ, ಮುರಳಿ ಬ್ರದರ್ಸ್ ಡ್ಯಾನ್ಸ್ ಕ್ರೀವ್ ನೆಹರುನಗರ ಇವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

LEAVE A REPLY

Please enter your comment!
Please enter your name here