ನೆಲ್ಯಾಡಿ: ಬಿದ್ದು ಸಿಕ್ಕಿದ್ದ ನಗದು, ದಾಖಲೆಗಳಿದ್ದ ಪರ್ಸ್ ಅನ್ನು ವಾರಿಸುದಾರರಿಗೆ ಹಿಂತಿರುಗಿಸುವ ಮೂಲಕ ನೀರಕಟ್ಟೆ ನಿವಾಸಿ, ವರ್ತಕ ಎನ್.ಅಹಮ್ಮದ್ ಬಾವಾ ಅವರು ಪ್ರಾಮಾಣಿಕತೆ ಮರೆದಿದ್ದಾರೆ.
ಕೆಲ ದಿನಗಳ ಹಿಂದೆ ಬೆಳ್ಳಂಬೆಳಿಗ್ಗೆ ನೀರಕಟ್ಟೆಯಲ್ಲಿ ಎನ್.ಅಹಮ್ಮದ್ ಬಾವಾ ಅವರಿಗೆ ಪರ್ಸ್ ಬಿದ್ದು ಸಿಕ್ಕಿತ್ತು. ಅದನ್ನು ಪರಿಶೀಲನೆ ನಡೆಸಿದ ವೇಳೆ ಅದರಲ್ಲಿ ನಗದು, ಡಾಲರ್, ಬ್ಯಾಂಕ್ ದಾಖಲೆ ಸೇರಿದಂತೆ ಇತರೇ ದಾಖಲೆಗಳಿತ್ತು. ಆದರೆ ಫೋನ್ ಯಾವುದೇ ನಂಬರ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಹಮ್ಮದ್ ಬಾವಾ ಅವರು ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್‌ನ ವಿಳಾಸಕ್ಕೆ ಪತ್ರ ಬರೆದು ಪರ್ಸ್ ಸಿಕ್ಕಿರುವ ಬಗ್ಗೆ ತಿಳಿಸಿ ತನ್ನ ಮೊಬೈಲ್ ನಂಬ್ರ ದಾಖಲಿಸಿ ಸಂಪರ್ಕಿಸುವಂತೆ ಕೋರಿದ್ದರು. ಅದರಂತೆ ಪರ್ಸ್ ಕಳೆದುಕೊಂಡಿದ್ದ ಮೂಡಬಿದ್ರೆ ನಿವಾಸಿ, ಅಮೆರಿಕಾದಲ್ಲಿ ಉದ್ಯೋಗಿಯಾಗಿರುವ ನಿತಿನ್ ಮೋಹನ್ ಶೆಟ್ಟಿ ಅವರು ಅಹಮ್ಮದ್ ಬಾವಾ ಅವರನ್ನು ಸಂಪರ್ಕಿಸಿ ನೀರಕಟ್ಟೆಗೆ ಬಂದು ಪರ್ಸ್ ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ. ನಿತಿನ್ ಮೋಹನ್‌ರವರು ಬೆಂಗಳೂರಿನಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನೀರಕಟ್ಟೆಯಲ್ಲಿ ಅವರ ಪರ್ಸ್ ಕಳೆದುಹೋಗಿತ್ತು. ಇದೀಗ ದಾಖಲೆಗಳಿದ್ದ ಪರ್ಸ್‌ನ ವಾರಿಸುದಾರರಿಗೆ ಪತ್ರ ಬರೆದು ಅವರಿಗೆ ಹಿಂತಿರುಗಿಸುವ ಮೂಲಕ ಅಹಮ್ಮದ್ ಬಾವಾ ಅವರು ಪ್ರಾಮಾಣಿಕತೆ ಮರೆದಿದ್ದಾರೆ.