ಕಾಣಿಯೂರು: ಬೆಳಂದೂರು ಗ್ರಾಮದ ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು , ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಎ 20,21ರಂದು ನಡೆಯಲಿದ್ದು, ನೇಮೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಎ.15ರಂದು ನಡೆಯಿತು.
ಅರ್ಚಕ ಶಿವರಾಮ ಉಪಾಧ್ಯಾಯ ಕಲ್ಪಡ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು.ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ, ಅಧ್ಯಕ್ಷ ಉದಯ ರೈ ಮಾದೋಡಿ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಅಜಿರಂಗಳ, ಚಂದಪ್ಪ ಗೌಡ ಹೊಸೊಕ್ಲು, ನಾರಾಯಣ ಗೌಡ ಕಂಡೂರು, ಲಿಂಗಪ್ಪ ಗೌಡ ಸಾರಕರೆ, ಬಾಬು ಮಾದೋಡಿ, ಪ್ರಧಾನ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಶೇಷಪ್ಪ ಕರೆಮನೆ, ಜೊತೆ ಕಾರ್ಯದರ್ಶಿ ಪ್ರೀತಮ್ ಕಂಡೂರು, ವಸಂತ ರೈ ಕಾರ್ಕಳ, ಶ್ರೀಧರ ಪೂಜಾರಿ ಅಬೀರ, ಮೋಹಿತ್ ಕಾಯೆರ್ತಡಿ,ಚೋಮ ಪಾತಾಜೆ, ರವಿರಾಜ್, ದೈವಗಳ ಸೇವಾಕರ್ತರಾದ ವಿಷ್ಣು ಗೌಡ ಅಬೀರ ಉಪಸ್ಥಿತರಿದ್ದರು.
ಎ 20ರಂದು ಬೆಳಿಗ್ಗೆ ತೋರಣ ಮುಹೂರ್ತ, ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ದೈವಗಳ ಭಂಡಾರ ಹಿಡಿಯುವುದು.ಎ 21ರಂದು ಬೆಳಿಗ್ಗೆ ಉಳ್ಳಾಕುಲು ದೈವಗಳ ನೇಮೋತ್ಸವ,ಬೈಸು ನಾಯಕ,ಬೇಡ ದೈವಗಳ ನೇಮೋತ್ಸವ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಕೋಜಿಲೆ ಬಿಡುವುದು ನಡೆಯಲಿದೆ.