ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇವಳದ ಎದುರು ಗದ್ದೆಯಲ್ಲಿರುವ ಶಿವಾರ್ಪಣಾ ವೇದಿಕೆಯಲ್ಲಿ ಎ.15ರಂದು ನಡೆದ ಆರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಅವರು ಚಾಲನೆ ನೀಡಿದರು. ಚಿರಂತನ’ ಮುಕುಂದ ಶ್ಯಾಮ್, ಸ್ಕಂದ, ಭಾರವಿ ಭಟ್ ಓಂಕಾರ ಮತ್ತು ಶಂಖನಾದ ಮಾಡಿದರು.
ಸರಳ ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದುಷಿ ಡಾ| ಶೋಭಿತಾ ಸತೀಶ್ ಅವರಿಂದ ಸುಗಮ ಸಂಗೀತ, ಭರತನೃತ್ಯ ಸಂಗೀತ ಅಕಾಡೆಮಿ, ಶ್ರೀ ವೈಷ್ಣವೀ ನಾಟ್ಯಾಲಯ ಪುತ್ತೂರು ವಿದ್ವಾನ್ ಸುಜಯ ಶಾನುಭೋಗ್ ಹುಬ್ಬಳ್ಳಿ ತಂಡದಿಂದ ಭರತನಾಟ್ಯ, ವಿವೇಕಾನಂದ ಮಹಾವಿದ್ಯಾಲಯದ ಲಲಿತಾ ಕಲಾ ಸಂಘ ಹಾಗೂ ಯಕ್ಷ ರಂಜಿನಿ ಮತ್ತು ಮಮ ಪರಿವಾರ ನೆಲ್ಲಿಕಟ್ಟೆ ಪುತ್ತೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ ಜರಗಿತು. ಸಾಂಸ್ಕೃತಿಕ ಉಪ ಸಮಿತಿ ಸದಸ್ಯರಾದ ನಿವೃತ ಶಿಕ್ಷಕ ಸುರೇಶ್ ಶೆಟ್ಟಿ, ವಿ.ಜಿ ಭಟ್, ಲಕ್ಷ್ಮಿ ವಿ ಜಿ ಭಟ್, ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ , ಡಾ| ರಾಜೇಶ್ ಬೆಜ್ಜಂಗಳ, ಕೃಷ್ಣ ವೇಣಿ ಮುಳಿಯ, ಸುಬ್ಬಪ್ಪ ಕೈಕಂಬ, ಡಾ ಶಶಿಧರ್ ಕಜೆ ಸಹಕರಿಸಿದರು.