ಎ.18: ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಮೊದಲ ಸೆಮಿಸ್ಟರ್ ಫಲಿತಾಂಶ

0

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಪದವಿಯ ಮೊದಲ ಸೆಮಿಸ್ಟರ್ ಫಲಿತಾಂಶವು ಎ.18ರಂದು ಮುಂಜಾನೆಯಿಂದ ಕಾಲೇಜಿನ ವೆಬ್‌ಸೈಟ್‌ನಲ್ಲಿ (vcputtur.ac.in)ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರನ್ನು ಬಳಸಿ ಫಲಿತಾಂಶವನ್ನು ಪಡೆಯಲು ಅವಕಾಶವಿದೆ.
ಒಟ್ಟು ಶೇ.98 ಉತ್ತೀರ್ಣತೆ ದಾಖಲಾಗಿದೆ. ಪ್ರಥಮ ಎಂ.ಎ. (ಪತ್ರಿಕೋದ್ಯಮ) ಶೇ.100, ಎಂ.ಎಸ್ಸಿ. (ಗಣಿತಶಾಸ್ತ್ರ) ಶೇ.60, ಎಂ.ಕಾಂ. ಶೇ.100, ಎಂ.ಎಸ್ಸಿ. (ರಸಾಯನಶಾಸ್ತ್ರ) ಶೇ.100 ರಂತೆ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.


ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತನೆಯಾದ ಬಳಿಕ ಪ್ರಕಟವಾಗುತ್ತಿರುವ ಮೊದಲ ಸ್ನಾತಕೋತ್ತರ ಫಲಿತಾಂಶ ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ.ಜಿ.ಭಟ್ ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಶ್ರೀಧರ ಎಚ್.ಜಿ. ಇವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here