ಹೋಪ್ ಫೌಂಡೇಶನ್ & ಈ-ಫ್ರೆಂಡ್ಸ್ ವತಿಯಿಂದ ಕೆಮ್ಮಾರದಲ್ಲಿ ಈದ್ ಕಿಟ್ ವಿತರಣೆ

0

ಕೆಮ್ಮಾರ: ವಿವಿಧ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸರ್ವರ ಪ್ರಶಂಸೆಗೆ ಪಾತ್ರವಾದ ಹೋಪ್ ಫೌಂಡೇಶನ್ & ಈ-ಫ್ರೆಂಡ್ಸ್ ವತಿಯಿಂದ ಹಿಮಾಯತುಲ್ ಇಸ್ಲಾಂ ಮದ್ರಸ ಕೆಮ್ಮಾರ ಶಕ್ತಿನಗರದಲ್ಲಿ ಕೊಯಿಲ, ಗಂಡಿಬಾಗಿಲು, ಕೆಮ್ಮಾರ ಪ್ರದೇಶಗಳ ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.

ಸುಮಾರು 40 ಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಹೋಪ್ ಫೌಂಡೇಶನ್ ನ ಸೈಫ್ ಸುಲ್ತಾನ್, ಈ-ಫ್ರೆಂಡ್ಸ್ ನ ಇಮ್ತಿಯಾಝ್ ಪಾರ್ಲೆ, ಇಜಾಝ್ ಸಾಲ್ಮರ, ಮುಝಮ್ಮಿಲ್, ಹಿಮಾಯತುಲ್ ಇಸ್ಲಾಂ ಮದ್ರಸ ಅಧ್ಯಕ್ಷರಾದ ಇಸಾಕ್ ಎನ್. ಎ, ಕಲಂದರ್ ಎಸ್. ಪಿ, ಅಝೀಝ್ ಬಿ.ಕೆ, ಅತಾವುಲ್ಲಾ ಕೆ.ಪಿ, ವಕೀಲರಾದ ಕಬೀರ್ ಕೆಮ್ಮಾರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here