ಕೇರಳದ ಲಾಟರಿಯಲ್ಲಿ ಉಪ್ಪಿನಂಗಡಿಯ ವ್ಯಕ್ತಿಗೆ ಒಲಿದ ಅದೃಷ್ಟ ಲಕ್ಷ್ಮಿ

0

ಉಪ್ಪಿನಂಗಡಿ: ಬದುಕಿನಲ್ಲಿ ಹಲವು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದರೂ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡಿದ ಇಲ್ಲಿನ ಕೆಂಪಿಮಜಲಿನ 72ರ ಹರೆಯದ ಹಿರಿ ಜೀವ ಆನಂದ ಟೈಲರ್ ಅವರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದು, ಇವರು ಕೇರಳ ರಾಜ್ಯ ಲಾಟರಿ ಕಾರುಣ್ಯ’ದ ಪ್ರಥಮ ಬಹುಮಾನವಾದ 80 ಲಕ್ಷ ರೂ. ವಿಜೇತರಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಆನಂದರವರು ಸುಮಾರು 30 ವರ್ಷಗಳ ಕಾಲ ಟೈಲರ್ ಆಗಿ ದುಡಿದವರು. ಬಳಿಕ ಕಾಲಿನ ಆರೋಗ್ಯ ಸಮಸ್ಯೆಯಿಂದಾಗಿ ತನ್ನ ವೃತ್ತಿಯನ್ನು ಬಿಡಬೇಕಾಯಿತು.

ಇವರ ಪತ್ನಿ ಗೃಹಿಣಿಯಾದರೆ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರ ವಿದ್ಯಾಭ್ಯಾಸದ ಬಳಿಕ ಪುತ್ರಿಯನ್ನು ಕೇರಳದ ನೀಲೇಶ್ವರಕ್ಕೆ ಮದುವೆ ಮಾಡಿಕೊಡಲಾಗಿದೆ. ಪುತ್ರರಿಬ್ಬರು ಉದ್ಯೋಗ ಮಾಡಿಕೊಂಡು ಕುಟುಂಬದ ಆಧಾರವಾಗಿದ್ದರು. ಆನಂದ ಟೈಲರ್ ಅವರಿಗೆ ಲಾಟರಿ ತೆಗೆಯುವ ಹವ್ಯಾಸವೇನೂ ಇರಲಿಲ್ಲ. ಯಾವಾಗಲಾದರೊಮ್ಮೆ ಮಗಳ ಮನೆ ಕೇರಳಕ್ಕೆ ಹೋದಾಗ ಲಾಟರಿ ಕೊಂಡುಕೊಳ್ಳುತ್ತಿದ್ದುಂಟು. ಹಾಗೆಯೇ ಕಳೆದ ವಾರ ಇವರು ಕೇರಳ ರಾಜ್ಯದ ಕಾರುಣ್ಯ’ ಲಾಟರಿಯನ್ನು ಕಾಸರಗೋಡಿನ `ಬೊಳ್ಪು’ ಲಾಟರಿ ಏಜೆನ್ಸಿಯವರಿಂದ ಕೊಂಡುಕೊಂಡಿದ್ದು, ಎ.15ರಂದು ಡ್ರಾ ಆದ ಆ ಲಾಟರಿಯಲ್ಲಿ ಆನಂದ ಟೈಲರ್ ಅವರಿಗೆ ಪ್ರಥಮ ಬಹುಮಾನವಾದ 80 ಲಕ್ಷ ರೂ. ಒಲಿದಿದೆ. ಈ ಮೂಲಕ ಅವರ ಇನ್ನಷ್ಟು ಕನಸುಗಳು ಈಡೇರಲಿ ಎಂಬುದು ಎಲ್ಲರ ಆಶಯವಾಗಿದೆ.

LEAVE A REPLY

Please enter your comment!
Please enter your name here