ಪುತ್ತೂರು: ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಎ.26 ಹಾಗೂ 27 ರಂದು ಮಹಾ ಉತ್ಸವವು ಜರಗಲಿದ್ದು, ಈ ಉತ್ಸವದ ಅಂಗವಾಗಿ ಗೊನೆ ಮುಹೂರ್ತವು ಎ.20ರಂದು ನೆರವೇರಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್ಮೂಲೆ, ಆಡಳಿತ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳಿತ ಮೊಕ್ತೇಸರರಾದ ಗಂಗಾಧರ ಸೀಗೆಬಲ್ಲೆ, ಪ್ರಧಾನ ಅರ್ಚಕ ಸುನಿಲ್, ಪ್ರಧಾನ ಸಂಚಾಲಕರಾದ ನೇಮಾಕ್ಷ ಸುವರ್ಣ, ಉಪಾಧ್ಯಕ್ಷರಾದ ಚಂದ್ರಕಲಾ ರವಿಪ್ರಕಾಶ್ ಗೌಡ, ಜಯಂತ ಶೆಟ್ಟಿ ಕಂಬಳತ್ತಡ್ಡ, ರವೀಂದ್ರ ಶೆಟ್ಟಿ ಕಂಬಳತ್ತಡ್ಡ, ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಪವಿತ್ರಾ ರೈ ಕೋಶಾಧಿಕಾರಿ ಸುರೇಶ್ ಪಿ, ರಾಮ ಕಾರೆಕ್ಕಾಡು, ಗೋಪಾಲ್ ಜಿ.ಬೆಟ್ಟಂಪಾಡಿ, ಭಾಸ್ಕರ ನೆಲ್ಲಿಗುಂಡಿ, ಹರೀಶ, ಗಿರೀಶ್ ಅರ್ಯಾಪು, ಪದ್ಮನಾಭ ಸುಳ್ಯ, ರಮೇಶ ಮೇಲಿನಕಾನ, ಗಿರೀಶ ಜಾರತ್ತಾರು, ಕೇಶವ ಜಾರತ್ತಾರು, ಸೇವಾ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಪಿ, ಪದ್ಮನಾಭ ಸುಳ್ಯ, ಯೋಗೀಶ, ತನಿಯಪ್ಪ, ಸತೀಶ, ರಾಮ ಆರ್ಯಾಪು, ವಸಂತ ಆರ್ಯಾಪು ಹಾಗೂ ಹಲವಾರು ಭಕ್ತರು ಹಾಜರಿದ್ದರು.