ಪ್ರಗತಿ ಸ್ಟಡಿ ಸೆಂಟರ್‌ಗೆ ದ್ವಿತೀಯ ಪಿಯುಸಿಯಲ್ಲಿ ಶೇ.98 ಫಲಿತಾಂಶ

0

ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ಗೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 98 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 23 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 8 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಒಟ್ಟು 80 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು 37 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕಲಾ ವಿಭಾಗದಲ್ಲಿ ಒಟ್ಟು 12 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಪ್ರಾಂಶುಪಾಲರಾದ ಕೆ ಹೇಮಲತಾ ಗೋಕುಲನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜ್ಞಾನ ವಿಭಾಗ : ವಿವೇಕ್ ಎಂ-539, ಜೀವನ್ ಎಂ.ಟಿ-525, ಅಬೀರ್ ಇಸ್ಮಾಯಿಲ್- 506, ದೀರಜ್- 504, ಮಹಮದ್ ಸಾಬಿಕ್-494, ಲಾವಣ್ಯ-491, ಜನ್ವಿತಾ-482, ಮಹಮದ್ ಅಫ್ರೀಜ್-471, ಪುನೀತ್-452 ಅಂಕ ಪಡೆದಿದ್ದಾರೆ.

ವಾಣಿಜ್ಯ/ಕಲಾ ವಿಭಾಗ: ನಿಹಾಂತ್-547, ಜಾಯಿದ್ ಸಲ್ಮಾನ್-477, ಸುರಕ್ಷಾ ನಂದ- 476, ಉಜ್ವಲ್ ಯು ನಾಯಕ್-470, ಆಲೀನಾ ಜಾರ್ಜ್-469, ರೇಷ್ಮಾ ಎಸ್- 462, ಮಹೇಶ್ ಕುಮಾರ್-428, ಸಚಿನ್-424, ರಶಾ ರುಕಿಯಾ-424, ಪ್ರಿಯಾಂಕ ಎಂ ಬಿ-419, ವನ್ಯಶ್ರೀ-417, ತಕ್ಷಿತ್ ಪಿ- 387, ನಿತಿನ್ ನಾಚಪ್ಪ-386, ಉದಿತ್ ಎಂ-377, ರೀನಾ ಫರ್ವೀನಾ 370, ಮುಹಮ್ಮದ್ ತಮೀಮ್-360 ಅಂಕ ಪಡೆದಿದ್ದಾರೆ.

LEAVE A REPLY

Please enter your comment!
Please enter your name here