* ವಾಣಿಜ್ಯ ವಿಭಾಗ 98% * ಕಲಾವಿಭಾಗ 80% * ವಿಜ್ಞಾನ ವಿಭಾಗ 96%
ಕಾಣಿಯೂರು: ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ಶೇಕಡಾ 92 ಫಲಿತಾಂಶವನ್ನು ಪಡೆದುಕೊಂಡಿದೆ. ಹಾಜರಾದ ಒಟ್ಟು 106 ವಿದ್ಯಾರ್ಥಿಗಳಲ್ಲಿ 97 ಮಂದಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 18 ಮಂದಿ ಡಿಸ್ಟಿಂಕ್ಷನ್, 56 ಮಂದಿ ಪ್ರಥಮ ಶ್ರೇಣಿ, 16 ಮಂದಿ ದ್ವಿತೀಯ ಶ್ರೇಣಿ ಹಾಗೂ 7 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಜಯಂತಿರವರು ತಿಳಿಸಿದ್ದಾರೆ.
ಕಲಾವಿಭಾಗ: ಕಾಲೇಜಿನ ಕಲಾ ವಿಭಾಗದಲ್ಲಿ ಹಾಜರಾದ 34 ವಿದ್ಯಾರ್ಥಿಗಳಲ್ಲಿ 27 ಮಂದಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡು, ಶೇ. 80 ಫಲಿತಾಂಶ ಬಂದಿರುತ್ತದೆ. ಕಾಣಿಯೂರು ಏರಜೆ ವೆಂಕಟ್ರಮಣ ಗೌಡ ಮತ್ತು ಶೇಷಮ್ಮರವರ ಪುತ್ರಿ ಹಿತೈಷಿ (550), ಬಾದಮಿ ತಾಲೂಕು , ಬಾಗಲಕೋಟೆ ಯೆಲ್ಲಪ್ಪ ಮತ್ತು ರೇಣುಕರವರ ಪುತ್ರ ಮಂಜುನಾಥ ಯೆಲ್ಲಪ್ಪ ವಾಲಿಕಾರ್ (514), ಎಣ್ಮೂರು ಚಾರ್ವಾಕ ಉದಯ ಕುಮಾರ್ ಮತ್ತು ಲಲಿತರವರ ಪುತ್ರಿ ಅರ್ಪತಾ ವೈ( 474) ಅಂಕ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗ: ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಹಾಜರಾದ 50 ವಿದ್ಯಾರ್ಥಿಗಳಲ್ಲಿ 49ಮಂದಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡು, ಶೇ 98 ಫಲಿತಾಂಶ ಬಂದಿರುತ್ತದೆ. ಮುರುಳ್ಯ ರಾಗಿಪೇಟೆ ಮಹಮ್ಮದ್ ಟಿ ಮತ್ತು ಶಮೀನರವರ ಪುತ್ರಿ ಫಾತಿಮತ್ ಮರ್ಝಾನ (553), ಐವತ್ತೋಕ್ಲು ನಿಡ್ವಳ ಮನೆ ಮೊಯಿದಿನ್ ಮತ್ತು ಜಮೀಲಾರವರ ಪುತ್ರಿ ಫಾತಿಮತ್ ಸಾಝೀಯಾ (550) ಎಣ್ಮೂರು ಕಟ್ಟಕಾಲೋನಿ ಪೂವಪ್ಪ ಮತ್ತು ಚಂದ್ರಾವತಿರವರ ಪುತ್ರಿ ಮಂಜುಳಾ (547), ಎಡಮಂಗಲ ಕರಿಂಬಿಲ ಹಸನ್ ಮತ್ತು ಬೀಪಾತಿಮರವರ ಪುತ್ರಿ ಹನ್ನತ್(541), ಬೆಳಂದೂರು ಬೊಟ್ಟತ್ತಾರು ಆಶ್ರ-ï ಮತ್ತು ಐಸಾಬಿರವರ ಪುತ್ರಿ ಫಾತಿಮತ್ ಕೌಶೀಲಾ (541), ಎಡಮಂಗಲ ನಡುಬೈಲು ಹರಿಶ್ಚಂದ್ರ ಎನ್ ಮತ್ತು ಪ್ರಮೀಳಾರವರ ಪುತ್ರಿ ದಿಶಾ (537), ಚಾರ್ವಾಕ ಓಡದಕೆರೆ ಮನೆ ರಮೇಶ್ ಬಿ ಮತ್ತು ಗೀತಾ ರವರ ಪುತ್ರಿ ರಕ್ಷಿತಾ (528), ಚಾರ್ವಾಕ ಬೊಮ್ಮಳಿಕೆ ದುಶ್ಯಂತ ಗೌಡ ಮತ್ತು ಸುಶೀಲಾರವರ ಪುತ್ರಿ ಧನ್ಯಶ್ರೀ(527), ಬೆಳಂದೂರು ಅಬೀರ ಆದಂ ಮತ್ತು ನೆಬಿಸಾರವರ ಪುತ್ರಿ ಅನ್ಸೀರಾ(526),ಕುದ್ಮಾರು ಜನತಾಗೃಹ ಇಸ್ಮಾಯಿಲ್ ಮತ್ತು ಜೊಹರಾರವರ ಪುತ್ರಿ ಆಯಿಷತ್ ಝುಲಾ (521), ಕಾಯಿಮಣ ಬೊಮ್ಮೋಡಿ ಆನಂದ ಗೌಡ ಮತ್ತು ಭುವನೇಶ್ವರಿರವರ ಪುತ್ರಿ ಯಜ್ಞಶ್ರೀ (518), ಬೊಬ್ಬೆಕೇರಿ ಬೆದ್ರಂಗಳ ಲಕ್ಷ್ಮಣ ಗೌಡ ಮತ್ತು ಕಮಲಾಕ್ಷಿರವರ ಪುತ್ರಿ ಕೃತಿಕಾ ಬಿ ಎಲ್( 518), ಮುರುಳ್ಯ ಯಶೋಧರ ರೈ ಮತ್ತು ಪ್ರೇಮಲತಾರವರ ಪುತ್ರಿ ಮೋಕ್ಷ ರೈ (513) ಅಂಕ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗ: ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಹಾಜರಾದ 22 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ 96 ಫಲಿತಾಂಶ ಬಂದಿರುತ್ತದೆ. ಎಣ್ಮೂರು ಉಲ್ಲಾಲಾಡಿ ಅಬ್ಬಾಸ್ ಮತ್ತು ಸಾರಮ್ಮರವರ ಪುತ್ರಿ ಸೌದಾಬಿ (541), ಕೊಡಿಯಾಲ ಕಣಿಲೆಗುಂಡಿ-ಶ್ರೀಧರ ಗೌಡ ಮತ್ತು ಗೀತಾರವರ ಪುತ್ರಿ ಯಶೋಧ (523), ಚಾರ್ವಾಕ ಬೀರೋಳಿಕೆ ಕುಶ ಮತ್ತು ವಸಂತಿರವರ ಪುತ್ರ ಸುಜನ್ (517) ಅಂಕ ಪಡೆದುಕೊಂಡಿದ್ದಾರೆ.