ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್‌ಗಳಲ್ಲೂ ಏಕಕಾಲದಲ್ಲಿ ಅಭಿಯಾನ:
ಪುತ್ತೂರು: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕೆಲವೆ ದಿನಗಳು ಬಾಕಿ ಇದೆ. ಹೀಗಾಗಿ ಚುನಾವಣೆ ಎದುರಿಸಲು ಡಬಲ್ ಇಂಜಿನ್ ಸರ್ಕಾರದ ಸಾಧನೆ ಕುರಿತಾಗಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ರಾಜ್ಯ ಬಿಜೆಪಿ ಮುಂದಾಗಿದ್ದು ಇದರ ಜೊತೆಗೆ ತಮ್ಮ ಅಭ್ಯರ್ಥಿಯ ಪರಿಚಯ ಪತ್ರವನ್ನು ಮನೆ ಮನೆಗೆ ತಲುಪಿಸಿ ಅಭ್ಯರ್ಥಿಯ ವಿಚಾರವನ್ನು ಮನದಟ್ಟು ಮಾಡುವ ಕಾರ್ಯ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್‌ಗಳಲ್ಲೂ ಏಕಕಾಲದಲ್ಲಿ ನಡೆಯುತ್ತಿದ್ದು, ಬೊಳುವಾರಿನಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಬೆಳಿಗ್ಗಿನಿಂದಲೇ ಮನೆ ಮನೆ ಸಂಪರ್ಕ ಅಭಿಯಾನ ಆರಂಭಗೊಂಡಿದೆ. ಬೊಳುವಾರಿನಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಅಭ್ಯರ್ಥಿ ಅಶಾ ತಿಮ್ಮಪ್ಪ ಅವರ ಪರಿಚಯ ಪತ್ರವನ್ನು ಮನೆ ಮತ್ತು ಅಂಗಡಿಗಳಿಗೆ ನೀಡುವ ಮೂಲಕ ಚಾಲನೆ ನೀಡಿ ಬಿಜೆಪಿ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಇಂದು ಶೇಖರ್, ನಗರಸಭೆ ಮಾಜಿ ಸದಸ್ಯರಾದ ಸುಜೀಂದ್ರ ಪ್ರಭು, ವನಿತಾ, ಮಾಜಿ ಪುರಸಭೆ ಅಧ್ಯಕ್ಷೆ ಪ್ರೇಮಲತಾ ರಾವ್, ಕಿರಣ್‌ಶಂಕರ್ ಮಲ್ಯ, ಸಾವಿತ್ರಿ ಕೊಂಬೆಟ್ಟು, ನೀಲಂತ್ ಬೊಳುವಾರು, ಸದಾನಂದ, ಮಾಜಿ ಪುರಸಭೆ ಅಧ್ಯಕ್ಷ ಲೋಕೇಶ್ ಹೆಗ್ಡೆ, ದಯಾನಂದ, ಗಣೇಶ್ ಪೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.