ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ.2 ಹಾಗೂ 3ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತವು ಎ.24ರಂದು ನೆರವೇರಿತು.
ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿದ ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ಚಂದಪ್ಪ ಪೂಜಾರಿಯವರ ತೋಟದಲ್ಲಿ ಗೊನೆ ಕಡಿಯಲಾಯಿತು. ಅರ್ಚಕ ಸದಾನಂದ ರವಿಯವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಗೊನೆ ಕಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಸದಸ್ಯರಾದ ಮಹಾಲಿಂಗ ನಾಯ್ಕ, ಚಂದಪ್ಪ ಪೂಜಾರಿ, ವಿಶ್ವನಾಥ ಕುಲಾಲ್, ಅರ್ಚಕ ಕೇಶವ ಭಟ್, ಸಿಬಂದಿ ಚಂದ್ರಶೇಖರ, ಈಶ್ವರ ಮಚ್ಚಿಮಲೆ, ಸುರೇಶ್ ಕುಂಜೂರು, ಮೋಕ್ಷಿತ್ ಕುಂಜೂರು ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಎ.29 ಪ್ರತಿಷ್ಠಾವರ್ಧಂತಿ, ಹೊರೆಕಾಣಿಕೆ:
ಕ್ಷೇತ್ರದ ಪ್ರತಿಷ್ಠಾ ವರ್ಧಂತಿ ಉತ್ಸವ, ಹೊರೆಕಾಣಿಕೆ ಸಮರ್ಪಣೆ ಹಾಗೂ ಕ್ಷೇತ್ರಕ್ಕೆ ನೂತನ ಪಲ್ಲಕ್ಕಿಯ ಆಗಮನವು ಮೇ.29ರಂದು ನಡೆಯಲಿದೆ. ಹೊರೆಕಾಣಿಕೆ ಹಾಗೂ ಪಲ್ಲಕಿಯ ಆಗಮನದ ಮೆರವಣಿಗೆಯು ಪರ್ಲಡ್ಕ ಬೈಪಾಸ್ ಬಳಿಯಿಂದ ಹೊರಟು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ. ಮೇ.2 ಹಾಗೂ 3ರಂದು ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.