ಪುತ್ತೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಕೊಳ್ಳುವುದು ಅಥವಾ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದು ಯಾ ಅವರೊಂದಿಗೆ ಸಂಬಂಧ ಇಟ್ಟಿರಬಾರದೆಂದು ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡಿದೆ.
ಸೇವಾ ನಿಯಮಗಳ ಪ್ರಕಾರ ರಾಜಕೀಯ ಚುನಾವಣೆಗಳಲ್ಲಿ ಭಾಗವಹಿಸಬಾರದು. ಯಾವುದೇ ನೌಕರನು ಸದಸ್ಯನಾಗಿರಬಾರದು ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯದಲ್ಲಿ ಭಾಗವಹಿಸುವ, ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಗೆ ಸಹಾಯ ಮಾಡುವ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಶಾಸಕಾಂಗದ ಸದಸ್ಯನಾಗಲು ಅನುಮತಿಯಿಲ್ಲದೆ ಚುನಾವಣೆಗೆ ನಿಲ್ಲುವ ಮತ್ತು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು. ಎಲ್ಲಾ ಉದ್ಯೋಗಿಗಳು ಈ ಆದೇಶವನ್ನು ಗಮನಿಸಿ ಅದನ್ನು ಅನುರಿಸಲು ಕ್ಯಾಂಪ್ಕೋ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡಿದೆ.