ಪುತ್ತೂರು ಕ್ಷೇತ್ರ: 8 ಮಂದಿ ಅಂತಿಮ ಕಣದಲ್ಲಿ

0

ಮಾದರಿ ಮತಪತ್ರದಲ್ಲಿ ಅಶೋಕ್ ರೈ ಹೆಸರು ನಂ.1
ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಹಿಂತೆಗೆದುಕೊಳ್ಳುವ ಅವಧಿ ಮುಗಿದು ಅಂತಿಮ ಕಣ ಸಿದ್ಧವಾಗಿದೆ.ಮತಯಂತ್ರದಲ್ಲಿ ಮುದ್ರಿತವಾಗಲಿರುವ ಮಾದರಿ ಮತಪತ್ರ‍್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ಹೆಸರು ನಂಬರ್ 1ನೇ ಸ್ಥಾನದಲ್ಲಿದೆ.ಪುತ್ತೂರು ಕ್ಷೇತ್ರದ ಚುನಾವಣಾಧಿಕಾರಿಯವರ ಕಚೇರಿ ನೊಟೀಸ್ ಬೋರ್ಡ್‌ ನಲ್ಲಿ ಮತಪತ್ರದ ಮಾದರಿಯನ್ನು ಪ್ರಕಟಿಸಲಾಗಿದೆ.
ಅಂತಿಮ ಕಣದಲ್ಲಿರುವ 8 ಅಭ್ಯರ್ಥಿಗಳ ಪೈಕಿ ಅಶೋಕ್ ಕುಮಾರ್ ರೈಯವರ ಹೆಸರು ನಂ.1ರಲ್ಲಿದೆ.ಅದಾದ ಬಳಿಕ ಕ್ರಮವಾಗಿ ನಂ.2-ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ನಂ.3-ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ, ನಂ.4-ಆಮ್ ಆದ್ಮಿ ಪಾರ್ಟಿಯ ಬಿ.ಕೆ.ವಿಶು ಕುಮಾರ್, ನಂ.5-ಎಸ್‌ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಶಾಫಿ, ನಂ.6-ಕರ್ನಾಟಕ ರಾಷ್ಟ್ರ ಸಮಿತಿಯ ಐವನ್ ಫೆರಾವೋ, ನಂ.7-ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ನಂ.8-ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲ ಹೆಸರು ಇದೆ.

ಪುತ್ತೂರು: ಮೇ10ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಪುತ್ತೂರು ವಿಧಾನ ಸಭಾ ಕ್ಷೇತ್ರ-206ರಲ್ಲಿ ಒಟ್ಟು 8 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಒಟ್ಟು 10 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.ಈ ಪೈಕಿ ಬಿಜೆಪಿ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಲಾ ಎರಡು ನಾಮ ಪತ್ರ ಸಲ್ಲಿಸಿದ್ದರು.ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಏ.24ರಂದು ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊAಡಿದ್ದಾರೆ.ತನಗೆ ಜೆಡಿಎಸ್ ಪಕ್ಷದ ಟಿಕೆಟ್ ಸಿಗದೇ ಇರುವುದರಿಂದ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಹಾಗೂ ಎಸ್‌ಡಿಪಿಐನಿಂದ ಹೆಚ್ಚುವರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಿ.ಇಬ್ರಾಹಿಂ ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊAಡಿದ್ದಾರೆ.ಅAತಿಮವಾಗಿ 8 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು:

ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿರುವ ಕಡಬ ತಾಲೂಕು ಕುಂತೂರು ಕುಂಡಡ್ಕದ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿರುವ ಸುಳ್ಯ ತಾಲೂಕು ನಡುಗಲ್ಲು ನಾಲ್ಕೂರು ಗ್ರಾಮದ ಹಳೆಮಜಲು ಚಿಲ್ತಡ್ಕದ ದಿವ್ಯಪ್ರಭಾ ಗೌಡ, ಅಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕೃಷಿ ವಿಜ್ಞಾನಿ ಮೈಸೂರು ಜಯನಗರ ಬಿ.ಕೆ.ವಿಶುಕುಮಾರ್, ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ಸುಳ್ಯ ತಾಲೂಕು ಬೆಳ್ಳಾರೆಯ ಕುಂಞಗುಡ್ಡೆ ಮನೆಯ ಇಸ್ಮಾಯಿಲ್ ಶಾಫಿ ಕೆ., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಪೆನ್ನೆ ಮನೆಯ ಐವನ್ ಫೆರಾವೋ ಪಿ., ಪಕ್ಷೇತರ ಅಭ್ಯರ್ಥಿಗಳಾಗಿ ಹಿಂದು ಸಂಘಟನೆಗಳ ಮುಖಂಡ ಮುಂಡೂರು ಗ್ರಾಮದ ನರಿಮೊಗರು ಪುತ್ತಿಲ ನಿವಾಸಿ ಅರುಣ್ ಕುಮಾರ್ ಪುತ್ತಿಲ, ಮಂಗಳೂರು ಮರಕ್ಕಡ ಕುಂಜತ್ತಬೈಲು ಅಯ್ಯಪ್ಪ ಗುಡಿ ಬಳಿಯ ರವಿ ಶೆಟ್ಟಿ ಕಾಂಪೌಂಡ್ ನಿವಾಸಿ ಸುಂದರ ಕೊಯಿಲ ಅಂತಿಮ ಕಣದಲ್ಲಿದ್ದಾರೆ.ಅಭ್ಯರ್ಥಿಗಳ ಪೈಕಿ ಎಸ್‌ಡಿಪಿಐನ ಇಸ್ಮಾಯಿಲ್ ಶಾಫಿ ಅವರು ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ಮೇ10ರಂದು ಚುನಾವಣೆ ನಡೆದು ಮೇ13ರಂದು ಮತ ಎಣಿಕೆ ಕಾರ್ಯಗಳು ನಡೆದು ಫಲಿತಾಂಶ ಘೋಷಣೆಯಾಗಲಿದೆ.

ಪುತ್ತಿಲರಿಗೆ ಬ್ಯಾಟ್, ಶಾಫಿಯವರಿಗೆ ರಿಕ್ಷಾ, ಸುಂದರರಿಗೆ ಸಿತಾರ್, ಐವನ್‌ರಿಗೆ ಬ್ಯಾಟರಿ ಟಾರ್ಚ್:

ಅಭ್ಯರ್ಥಿಗಳ ಪೈಕಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಹೊರತು ಪಡಿಸಿ ಇತರ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಚಿಹ್ಹೆ ನೀಡಿದೆ.ಪ್ರತಿ ಅಭ್ಯರ್ಥಿಗೆ ಆಯೋಗದ ನಿರ್ದಿಷ್ಟ ಚಿಹ್ನೆಗಳ ಪೈಕಿ ಮೂರು ಚಿಹ್ನೆಗಳನ್ನು ಕೇಳಲು ಅವಕಾಶವಿತ್ತು.ಈ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿರುವ ಅರುಣ್ ಕುಮಾರ್ ಪುತ್ತಿಲರವರಿಗೆ ಬ್ಯಾಟ್, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಐವನ್ ಫೆರಾವೋರವರಿಗೆ ಬ್ಯಾಟರಿ ಟಾರ್ಚ್,ಎಸ್‌ಡಿಪಿಐಯ ಇಸ್ಮಾಯಿಲ್ ಶಾಫಿಯವರಿಗೆ ಆಟೋ ರಿಕ್ಷಾ ಮತ್ತು ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲ ಅವರಿಗೆ ಸಿತಾರ್ ಚಿಹ್ನೆಯಾಗಿ ನೀಡಲಾಗಿದೆ.

LEAVE A REPLY

Please enter your comment!
Please enter your name here