ಭಾಷಣಕ್ಕೆ ಸೀಮಿತವಾಗದೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಬಿಜೆಪಿ ಮಹಿಳೆಗೆ ನಿಜವಾದ ಗೌರವ ನೀಡಿದೆ-ಸಚಿವೆ ಭಾರತಿ ಪವಾರ್

0

ಪುತ್ತೂರು: ರಾಜಕಾರಣದಲ್ಲಿ ಮಹಿಳೆರಿಯರಿಗೆ ಗೌರವ, ಸ್ಥಾನಮಾನ ಎಂದೆಲ್ಲಾ ಹೇಳುವುದು ಮಾತ್ರವಲ್ಲ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಗೆ ಅಭ್ಯರ್ಥಿಯಾಗಿ ಅವಕಾಶವನ್ನು ಬಿಜೆಪಿ ಪಕ್ಷ ಕೊಡುವ ಮೂಲಕ ಎಲ್ಲರಿಗೂ ಅವಕಾಶ ನೀಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಸಮಾಜಕಲ್ಯಾಣ ಇಲಾಖೆ ಸಚಿವೆ ಭಾರತಿ ಪವಾರ್ ಅವರು ಹೇಳಿದರು.


ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪವಾರ್, ನಮ್ಮ ಪಕ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಂಜೀವ್ ಮಠಂದೂರು ಉತ್ತಮ ಅಭಿವೃದ್ದಿ ಕಾರ್ಯಕ್ರಮ ಮಾಡಿದ್ದಾರೆ ಮತ್ತು ಮುಂದೆ ಆಶಾ ತಿಮ್ಮಪ್ಪ ಅವರಿಗೂ ಉತ್ತಮ ಅಭಿವೃದ್ದಿ ಕಾರ್ಯ ಮಾಡಲು ಅವಕಾಶ ನೀಡುತ್ತಿದ್ದು, ಹೀಗೆ ಬಿಜೆಪಿ ಎಲ್ಲರಿಗೂ ಅವಕಾಶ ಕೊಡುತ್ತದೆ. ಈ ಭಾರಿ ಮಹಿಳೆಗೆ ಅವಕಾಶ ಕೊಟ್ಟಿದೆ. ಅಂತ್ಯೋದಯ, ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಕಾರ್ಯಕ್ರಮದ ಮೂಲಕ ಜನರ ವಿಶ್ವಾಸವನ್ನು ಬಿಜೆಪಿ ಪಡೆದಿದೆ. ಸಾಂಕ್ರಾಮಿಕ ಸಂಕಷ್ಟ ಸಂದರ್ಭದಲ್ಲೂ ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಆರೋಗ್ಯದ ರಕ್ಷಣೆ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಹಲವು ಯೋಜನೆಗಳು‌ ಪೂರ್ಣಗೊಳ್ಳಲಿದೆ. ಈ ಭಾಗದ ಶಾಸಕ ಸಂಜಿವ ಮಠಂದೂರು ಅವಧಿಯಲ್ಲಿ ನಡೆದ 1,500 ಕೋಟಿ ರೂ. ಅಭಿವೃದ್ದಿ ಯೋಜನೆಗಳು ಆಶಾ ತಿಮ್ಮಪ್ಪ ಅವರ ಗೆಲುವಿಗೆ ಪೂರಕವಾಗಲಿದೆ. ಪುತ್ತೂರಿನ ಬೇಡಿಕೆಯಾಗಿರುವ ಮೆಡಿಕಲ್ ಕಾಲೇಜಿನ ಭರವಸೆಯನ್ನೂ ಬಿಜೆಪಿ ನೀಡಲಿದೆ ಎಂದು ಅವರು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ್, ಮಾದ್ಯಮ ಪ್ರಮುಖ್ ಚಂದ್ರಶೇಖರ್ ರಾವ್ ಬಪ್ಪಳಿಗೆ, ಮಂಜುಳಾ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here