ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮಕ್ಕಳ ಕಲರವ – ಬೇಸಿಗೆ ಶಿಬಿರದ ಉದ್ಘಾಟನೆ – ಮೇಘ ಕಲಾ ಆರ್ಟ್ಸ್ ಡ್ಯಾನ್ಸ್ ಸ್ಟುಡಿಯೋ,ಮುರಳಿ ಬ್ರದರ್ಸ್ ಡಾನ್ಸ್ ತಂಡದ ಸಂಯೋಜನೆ

0

ಪುತ್ತೂರು: ಮೇಘ ಕಲಾ ಆರ್ಟ್ಸ್ ಮತ್ತು ಡ್ಯಾನ್ಸ್ ಸ್ಟುಡಿಯೋ ಮತ್ತು ಮುರಳಿ ಬ್ರದರ್ಸ್ ತಂಡದ ವತಿಯಿಂದ ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ 7 ದಿನಗಳ ಕಾಲ ನಡೆಯಲಿರುವ ಮಕ್ಕಳ ಬೇಸಿಗೆ ಶಿಬಿರ “ಕಲರವ-2023” ಎ.25ರಂದು ಉದ್ಘಾಟನೆಗೊಂಡಿತು.
ಶಿಬಿರವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸಂಚಾಲಕ, ಯಕ್ಷ ಬೊಳ್ಳಿ ದಿನೇಶ್ ರೈ ಕಡಬ ಮಾತನಾಡಿ, ಬೇಸಿಗೆ ಶಿಬಿರ ಮಕ್ಕಳಲ್ಲಿ ನಾಯಕತ್ವ ಬೆಳೆಸುವುದರ ಜೊತೆಗೆ, ಸೃಜನಾತ್ಮಕ ಮನೋಭಾವನೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.


ಅಧ್ಯಕ್ಷೆತೆ ವಹಿಸಿದ ಲಿಟ್ಲ್ ಫ್ಲವರ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ. ವೆನಿಶಾ ಬಿ ಎಸ್ ಮಾತನಾಡಿ ಹುಟ್ಟುವಾಗಲೇ ಅಪಾರ ಪ್ರತಿಭೆಗಳನ್ನು ಹೊತ್ತು ತರುವ ಮಕ್ಕಳು ಅದನ್ನು ಅರಿತು ಅದಕ್ಕೆ ಪೂರಕವಾದ ಇಂತಹ ಬೇಸಿಗೆ ಶಿಬಿರ ತೊಡಗಿಸಿಕೊಂಡು ನಿಮ್ಮಲ್ಲಿನ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ ಎಂದರು.
ಹರೀಶ್ ಜಿ ಪಡುಮಲೆ, ಬಾಲ ಕಲಾವಿದೆ ಅದಿತಿ ಪ್ರಶಾಂತ್, ಲಿಟ್ಲ್ ಫ್ಲವರ್ ಶಾಲಾ ರಕ್ಷಕ ಶಿಕ್ಷಕ ಸಂಘದ ನಿಕಟ ಪೂರ್ವ ಉಪಾಧ್ಯಕ್ಷ ರಮೇಶ್ ಕೆ ವಿ, ಲಿಟ್ಲ್ ಫ್ಲವರ್ ಶಾಲೆಯ ಹಿರಿಯ ಶಿಕ್ಷಕಿ ಭಗಿನಿ. ವಿನೀತಾ ಪಿರೇರಾ, ಕೋಸ್ಟಲ್ ಹೋಮ್ ದರ್ಬೆಯ ಮಾಲಕ ಸಂದೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೇಘ ಆರ್ಟ್ಸ್ ಮತ್ತು ಡ್ಯಾನ್ಸ್ ಸ್ಟುಡಿಯೋದ ಮಾಲಕಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶಾರದಾ ದಾಮೋದರ್ ಸ್ವಾಗತಿಸಿದರು. ಮುರಳಿ ಬ್ರದರ್ಸ್ ತಂಡದ ಮಾಲಕ ಮುರಳಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಮುರಲಿ ಬ್ರದರ್ಸ್ ತಂಡದ ಸದಸ್ಯರಾದ ಜೀವನ್, ರಕ್ಷಾ, ಶಿವ ಮುರಳಿ, ತರ್ಷಿನಿ, ಪ್ರಜ್ವಲ್, ಅರುಣ್ ಮುರಳಿ, ಶಾಯ ಹರ್ವಿನ್, ಪೂಜಾ ಹಾಗೂ ಹರ್ಷಿತ್ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.
ಶಿಬಿರವು ಎ.25ರಿಂದ ಪ್ರಾರಂಭಗೊಂಡು ಮೆ.2ರ ತನಕ ನಡೆಯಲಿದ್ದು, ಶಿಬಿರದಲ್ಲಿ ಡ್ಯಾನ್ಸ್ (ಸ್ಟೇಜ್ ಫಿಯರ್) ಕ್ರಾಫ್ಟ್, ಡ್ರಾಯಿಂಗ್ ತರಬೇತಿಗಳನ್ನು ನುರಿತ ಕಲಾವಿದರಿಂದ ವಿಶೇಷ ತರಬೇತಿ ನೀಡಲಾಗುವುದು.
ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ. 6 ವರ್ಷದಿಂದ 14 ವರ್ಷದ ಮಕ್ಕಳು ತರಬೇತಿ ಶಿಬಿರದಲ್ಲಿ ಭಾಗಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 8050843216, 9845166406 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here