ಪುತ್ತೂರು : ಲಂಚ, ಭ್ರಷ್ಟಾಚಾರವನ್ನು ಬಹಿಷ್ಕರಿಸಿ, ಅದರಿಂದ ತೊಂದರೆಯಾಗುವ ಜನರಿಗೆ ಪರಿಹಾರವನ್ನು, ಹಣವನ್ನು ತೆಗೆಸಿಕೊಡುವ ಪ್ರತಿಜ್ಞೆ ಮಾಡುವಂತೆ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾರರ ಮೂಲಕ ಪ್ರತಿಜ್ಞೆ ಮಾಡಿಸುವ ಕಾರ್ಯ ಈಗಾಗಲೇ ವರುಣಾ ಕ್ಷೇತ್ರದಲ್ಲಿ ನಡೆದಿದ್ದು, ಇದೀಗ ಸಿ.ಎಂ. ಬಸವರಾಜ್ ಬೊಮ್ಮಾಯಿ ಸ್ಪರ್ಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದಿನಿಂದ (ಮೇ.1) ಆರಂಭಗೊಂಡಿದ್ದು, ಶಿಗ್ಗಾಂವಿ ಕ್ಷೇತ್ರದ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುದ್ದಿ ಜನಾಂದೋಲನ ವೇದಿಕೆಯ ಸಂಚಾಲಕ ಡಾ. ಯು.ಪಿ.ಶಿವಾನಂದರು ತಮ್ಮ ಸಿಬ್ಬಂದಿಗಳಾದ ಹಸೈನಾರ್ ಜಯನಗರ, ದಯಾನಂದ ಕೊರತ್ತೋಡಿ, ಕುಶಾಲಪ್ಪ ಪುತ್ತೂರು ಜತೆಗೂಡಿ ಫಲಕವನ್ನು ಜನತೆಗೆ ನೀಡಿ ಪ್ರತಿಜ್ಞೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.