ಬೆಟ್ಟಂಪಾಡಿ; ವಿಪತ್ತು ನಿರ್ವಹಣಾ ತಂಡಕ್ಕೆ ಗೌರವಾರ್ಪಣೆ- ಸನ್ಮಾನ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಏ.30 ರಂದು ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭಾವನದಲ್ಲಿ ನಡೆಯಿತು.

ಯೋಜನೆಯ ತಾಲೂಕು ಯೊಜನಾಧಿಕಾರಿ ಆನಂದ ಇವರು ತಂಡದ ಸದಸ್ಯರಿಗೆ ಶಾಲು ಸ್ಮರಣಿಕೆ ನೀಡಿ ಅಭಿನಂದಿಸಿ ಮಾತನಾಡಿ ಈ ವಿಪತ್ತು ನಿರ್ವಹಣಾ ತಂಡ ಒಂದು ವರ್ಷದಲ್ಲಿ ನಿರ್ವಹಿಸಿದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇಡೀ ರಾಜ್ಯಕ್ಕೆ ಒಂದು ಮಾದರಿ ತಂಡವಾಗಿದ್ದು ಪೂಜ್ಯ ಖಾವಂದರು ಕೂಡ ಇವರ ಸಾಧನೆಯನ್ನು ಮೆಚ್ಚಿ ಶ್ಲಾಘಿಸಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಉತ್ತಮ ಕಾರ್ಯ ನಿರ್ವಹಣೆ;
ವಿಪತ್ತು ನಿರ್ವಹಣಾ ತಂಡವು ಕಳೆದ ಒಂದು ವರ್ಷದಲ್ಲಿ ಹಲವು ದೇವಸ್ಥಾನ ಮತ್ತು ದೈವಸ್ಥಾನಗಳ ಬ್ರಹ್ಮಕಲಶ ಹಾಗೂ ಜಾತ್ರೆಗಳಲ್ಲಿ ಸ್ವಯಂ ಸೇವಕರಾಗಿ ಸೇವೆ. ಮನೆ , ಶಾಲೆ ದುರಸ್ತಿ, ದೇವಸ್ಥಾನ ಮತ್ತು ಶಾಲೆಗಳಲ್ಲಿ ಸ್ವಚ್ಚತೆ,ಆಕಸ್ಮಿಕವಾಗಿ ಬೆಂಕಿ ಬಿದ್ದಾಗ ಸ್ವಯಂ ಪ್ರೇರಿತರಾಗಿ ಪರಿಸರ ರಕ್ಷಣೆ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅವರ ರಕ್ಷಣೆ ಮೊದಲಾದ ಕೆಲಸಗಳನ್ನು ಮಾಡಿ ಈ ತಂಡ ಪ್ರಶಂಸೆಗೆ ಪಾತ್ರವಾಗಿದೆ ಎಂದು ವಲಯ ಮೆಲ್ವೀಚಾರಕ ಶಿವಪ್ಪ .ಬಿ ಹೇಳಿದರು. 

ಕಳೆದ ಎರಡೂವರೆ ವರ್ಷದಿಂದ ತಾಲೂಕು ಯೋಜನಾಧಿರಿಕಾಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದರವರು ಧರ್ಮಸ್ಥಳ ಮುಖ್ಯ ಕಚೇರಿಗೆ ವರ್ಗಾವಣೆ ಗೊಂಡಿದ್ದು ಅವರನ್ನು ಈ ಸಂದರ್ಭದಲ್ಲಿ ಹೂಗುಚ್ಚ ನೀಡಿ ಗೌರವಿಸಿ ಬೀಳ್ಕೋಡಲಾಯಿತು.ತನ್ನ ಸೇವೆಯ ಸಂದರ್ಭದಲ್ಲಿ ಇಲ್ಲಿ ಎಲ್ಲರೂ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.ನೂತನ ಯೋಜನಾಧಿಕಾರಿಯಾಗಿ ಆಗಮಿಸಿದ ಶಶಿಧರ್ ರವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.ನೂತನ ಯೋಜನಾಧಿಕಾರಿಗಳು ಸರ್ವರ ಸಹಕಾರ ಕೋರಿದರು.

ಗೌರವಾರ್ಪಣೆ; 
ಈ ಕಾರ್ಯಕ್ರಮವನ್ನು ಆಯೋಜಿಸಲು ಸಹಕಾರ ನೀಡಿದ ಒಕ್ಕೂಟದ ವಲಯ ಅಧ್ಯಕ್ಷ ಬಾಲಕೃಷ್ಣ ಹಾಗೂ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರವಿ ಕಟೀಲ್ತಡ್ಕ ಇವರನ್ನು ಗೌರವಿಸಲಾಯಿತು.ಅಲ್ಲದೆ ವಿಪತ್ತು ನಿರ್ವಹಣಾ ತಂಡದ ಒಂದು ವರ್ಷ ಅವದಿಯಲ್ಲಿ ನೀಡಿದ ಸೇವೆ ಮತ್ತು ಸಾಧನೆಗಳ ಬಗ್ಗೆ ಧರ್ಮಾಧಿಕಾರಿಗಳವರಿಗೆ ವರದಿ ಸಲ್ಲಿಸಿದ ತಂಡದ ಸದಸ್ಯ ಆನಂದರವರನ್ನು ಗೌರವಿಸಲಾಯಿತು.  ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಸೀತಾರಾಮ ಗೌಡ, ನಿಡ್ಪಳ್ಳಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ, ರೆಂಜ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಪಾಣಾಜೆ ಒಕ್ಕೂಟದ ಅಧ್ಯಕ್ಷ ಐತ್ತಪ್ಪ, ಚೂರಿಪದವು ಒಕ್ಕೂಟದ ಅಧ್ಯಕ್ಷೆ ಅನಿತಾ, ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷೆ ಸರೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಗೀತಾ ಉಪ್ಪಳಿಗೆ ಪ್ರಾರ್ಥಿಸಿ ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ವಂದಿಸಿದರು. ವಲಯ ಮೆಲ್ವೀಚಾರಕ ಶಿವಪ್ಪ. ಬಿ ಕಾರ್ಯಕ್ರಮ ನಿರೂಪಿಸಿದರು. ವಿಪತ್ತು ನಿರ್ವಹಣಾ ತಂಡದ ಸಂಚಾಲಕಿ ಪದ್ಮಾವತಿ.ಡಿ ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತೀತರರು ಪಾಲ್ಗೊಂಡರು.

LEAVE A REPLY

Please enter your comment!
Please enter your name here