ಮುಕ್ವೆ, ಪುರುಷರಕಟ್ಟೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಚುನಾವಣಾ ಪ್ರಚಾರ

0


*ದೆಹಲಿಯ ಆಮ್ ಆದ್ಮಿ ಪಕ್ಷದ ಉಚಿತ ಯೋಜನೆಯನ್ನು ಲೇವಡಿ ಮಾಡುತ್ತಿದ್ದ ಪಕ್ಷದವರು ಈಗ ಉಚಿತ ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಾರೆ-ಪುರುಷೋತ್ತಮ ಗೌಡ

ಪುತ್ತೂರು: ಆಮ್ ಆದ್ಮಿ ಪಾರ್ಟಿ ವತಿಯಿಂದ ಮುಕ್ವೆ, ಪುರುಷರಕಟ್ಟೆ ಜಂಕ್ಷನ್‌ನಲ್ಲಿ ಪಕ್ಷದ ಅಭ್ಯರ್ಥಿ ಡಾ ಬಿ.ಕೆ.ವಿಶುಕುಮಾರ್ ಗೌಡರವರ ಪರ ಪ್ರಚಾರ, ಮತಯಾಚನೆ ನಡೆಸಲಾಯಿತು. ಅಭ್ಯರ್ಥಿ ಡಾ.ಬಿ.ಕೆ ವಿಶುಕುಮಾರ್ ಗೌಡ ಮಾತನಾಡಿ ಪುತ್ತೂರು ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮತವನ್ನು ನನ್ನ ಪೊರಕೆ ಚಿಹ್ನೆಗೆ ಮತ ನೀಡಿ ಆಶೀರ್ವಾದ ಮಾಡಿ ವಿಧಾನ ಸಭೆಗೆ ಪ್ರವೇಶದ ಅವಕಾಶ ಕೊಡಿ ಎಂದರು.


ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಪುರುಷೋತ್ತಮ ಗೌಡ ಕೋಲ್ಪೆ ಮಾತನಾಡಿ ದೆಹಲಿಯ ಉಚಿತ ಯೋಜನೆಯನ್ನು ಉಚಿತ ಕೊಟ್ಟರೆ ದೇಶ ದಿವಾಳಿಯಾಗಿ ಪಾಕಿಸ್ತಾನ, ಶ್ರೀಲಂಕಾದಂತೆ ಆಗುತ್ತದೆ ಎಂದು ಜನರನ್ನು ಮಾತಿನ ಮೂಲಕ ವಂಚನೆ ಮಾಡಿ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಲೇವಡಿ ಮಾಡುತ್ತಿದ್ದ ಪಕ್ಷದವರು ಈಗ ಅವರೇ ಉಚಿತ ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here