ಪುತ್ತೂರು: ಪೈನಾನ್ಸ್ ಸಂಸ್ಥೆಯೊಂದರಿಂದ ಸಾಲ ಪಡೆದು ಸಾಲ ಮರುಪಾವತಿಗೆ ನೀಡಿದ ಚೆಕ್ ಅಮಾನ್ಯವಾದ ಹಿನ್ನೆಲೆಯಲ್ಲಿ ಕಳೆದ 9 ವರ್ಷಗಳಿಂದ ನ್ಯಾಯಾಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಗೆ ಪುತ್ತೂರು ನ್ಯಾಯಾಲಯ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಾಣೆಮಂಗಳೂರು ಬೊಳಂಗಡಿ ಹೊಸಮನೆ ನಿವಾಸಿ ರಾಜೇಶ್ ಎಂಬವರು ಆರೋಪಿಯಾಗಿದ್ದು, ಅವರು 9 ವರ್ಷಗಳ ಹಿಂದೆ ಪುತ್ತೂರಿನ ಶ್ರೀರಾಮ್ ಪೈನಾನ್ಸ್‌ನ ಬಂಟ್ವಾಳ ಶಾಖಾ ಸಂಸ್ಥೆಯಿಂದ ಸಾಲ ಪಡೆದಿದ್ದರು. ಸಾಲದ ಮರುಪಾವತಿ ಮಾಡದೆ ಇದ್ದಾಗ ಸಾಲದ ಮರುಪಾವತಿಗೆ ನೀಡಿದ ಚೆಕ್‌ಗೆ ಸಂಬಂಧಿಸಿ ಸಂಸ್ಥೆ 2014ರಲ್ಲಿ ನ್ಯಾಯಾಲಯಕ್ಕೆ ದೂರು ನೀಡಿತ್ತು. ವಿಚಾರಣೆ ನಡೆಯುತ್ತಿದ್ದ ಸಂದರ್ಭ ಆರೋಪಿ ರಾಜೇಶ್ ಅವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಮೇ 2ರಂದು ಬೊಳಂಗಡಿಯ ಮನೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯು ಸಂಸ್ಥೆಗೆ ರೂ. 1.31 ಲಕ್ಷ ನೀಡಬೇಕು ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.