ಸ್ವಂತ ಆಸೆ, ಆಕಾಂಕ್ಷೆಗಳಿಗೆ ಪಾರ್ಟಿ, ಸಮಾಜವನ್ನು ಬಲಿ ಕೊಡುವ ಪ್ರಯತ್ನ ಬೇಡ- ಡಿವಿಎಸ್

0

ಪುತ್ತೂರು: ಪಕ್ಷದ ಟಿಕೆಟ್ ಸಿಕ್ಕಿಲ್ಲ ಎಂದು ಹೇಳಿ ಸ್ವಯಂ ಘೋಷಿತ ನಾಯಕರಾಗುವುದು, ಬೇರೆ ಪಕ್ಷಕ್ಕೆ ಹೋಗುವುದು, ಸ್ವಯಂ ಘೋಷಿತ ಖಲಿಸ್ಥಾನಿ ನಾಯಕರಂತೆ ಸ್ವಯಂ ಘೋಷಿತ ಹಿಂದೂ ನಾಯಕ ಎಂದು ಹೇಳಿ ಪಕ್ಷ ವಿರೋಧಿ ಕೆಲಸ ಮಾಡುವುದು ರಾಜಕಾರಣ ಅಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷೇತರ ಅಭ್ಯರ್ಥಿಯನ್ನು ಈ ಹಿಂದೆ ಪ್ರಸಾದ್ ಭಂಡಾರಿ ಅವರ ಆಸ್ಪತ್ರೆಯಲ್ಲಿ ನೋಡುತ್ತಿದ್ದೆ ಈಗ ಅವರಿಗೆಲ್ಲ ಪ್ರಭಾಕರ್ ಭಟ್ ಮತ್ತು ಪ್ರಸಾದ್ ಭಂಡಾರಿ ದೆವ್ವ ಆಗಿ ಬಿಟ್ಟಿದ್ದಾರೆ. ಸ್ವಂತ ಆಸೆ, ಆಕಾಂಕ್ಷೆಗಳಿಗೆ ಪಾರ್ಟಿ, ಸಮಾಜವನ್ನು ಬಲಿ ಕೊಡುವ ಪ್ರಯತ್ನ ಇದು ಎಂದು ಪರೋಕ್ಷವಾಗಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿ ಹಾಯ್ದರು.

ನಾನಿರುವಾಗ ಭಾಸ್ಕರ್ ಆಚಾರ್, ಅರುಣ್ ಪುತ್ತಿಲ ಎಲ್ಲ ಪಾರ್ಟಿಗೆ ಕೆಲಸ ಮಾಡುತ್ತಿದ್ದರು. ಶನಿ ಪೂಜೆಯಲ್ಲಿ ಅವರ ಶನಿ ಬಿಡಿಸಿದ್ದು ಕೂಡಾ ನೀವು ನೋಡಿದ್ದೀರಿ ಎಂದು ಹೇಳಿದ ಡಿ.ವಿ ಪುತ್ತೂರಿನ ಜನತೆ ಪ್ರಜ್ಞಾವಂತರು ಬಿಜೆಪಿಯನ್ನು ಯಾರಿಗೂ ಏನೂ ಮಾಡಲು ಆಗುವುದಿಲ್ಲ, ಬಿಜೆಪಿ ಭ್ರದಕೋಟೆಯಲ್ಲಿ ಬಿರುಕನ್ನುಂಟು ಮಾಡುವವರೇ ಅದಕ್ಕೆ ಬಲಿಯಾಗುತ್ತಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here